ಕಾಂಗ್ರೆಸ್​ ನಾಯಕಿ ಸೇರಿ ಒಂದೇ ಕುಟುಂಬದ ಮೂವರ ಸಾವು!

death
Published on

ವಿಜಯನಗರ: ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಸೇರಿ ಒಂದೇ ಕುಟುಂಬದ ಮೂವರು ಕರೊನಾಗೆ ಬಲಿಯಾದ ಹೃದಯವಿದ್ರಾವಕ ಘಟನೆ ಹೊಸಪೇಟೆಯಲ್ಲಿ ಸಂಭವಿಸಿದೆ.

ಹತ್ತು ದಿನದ ಹಿಂದೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಮತ್ತು ಇವರ ತಮ್ಮ ಸಾವಿಯೋ ಸ್ಮಿತ್(42) ಮೃತಪಟ್ಟಿದ್ದರು. ಅಕ್ಕ-ತಮ್ಮ ಇಬ್ಬರಿಗೂ ಕರೊನಾ ಸೋಂಕು ತಗುಲಿತ್ತು. ತಮ್ಮ ಸತ್ತ ಮರುದಿನವೇ ಅಕ್ಕನೂ ಕೊರನಾದಿಂದ ಕೊನೆಯುಸಿರೆಳೆದಿದ್ದರು. ಒಂದು ದಿನದ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿದ್ದ ತಂದೆ ಬೇರಿ ಸ್ಮಿತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರ ಸಾವು ಕುಟುಂಬಸ್ಥರಿಗೆ ಆಘಾತ ತರಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net