ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳವು: ದೇವರಿಗೆ ಮೊರೆ ಹೋದ ಕ್ಷಣಾರ್ಧದಲ್ಲೇ ವಾಹನ ಪತ್ತೆ!

Sri Sahasralingheshwara Mahakali Temple Uppinangadi
Published on

ಉಪ್ಪಿನಂಗಡಿ: ಉದ್ಯಮಿಯೊಬ್ಬರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಹಲವು ದಿನಗಳಾದರೂ ವಾಹನ ಪತ್ತೆಯಾಗಿರಲಿಲ್ಲ. ದೇವರ ಮೊರೆಹೋದ ಕ್ಷಣಾರ್ಧದಲ್ಲೇ ವಾಹನ ಸಿಕ್ಕಿದೆ ಎಂದು ಮಾಲೀಕರ ಮೊಬೈಲ್​ಗೆ ಸಂದೇಶ ಬಂದಿದೆ!

ಉದ್ಯಮಿ ಸುಂದರ ಗೌಡ ಎಂಬುವರ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಹಲವು ದಿನಗಳಾದರೂ ವಾಹನ ಪತ್ತೆಯಾಗಿರಲಿಲ್ಲ. ಹೀಗಾಗಿ ಸುಂದರ ಗೌಡ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದೇವಸ್ಥಾನದಿಂದ ಹೊರ ಬರಬೇಕೆನ್ನುವಷ್ಟರಲ್ಲಿ ಕಳವಾದ ವಾಹನ ಕೊಡಗಿನ ಶನಿವಾರಸಂತೆ ಸಮೀಪ ಪತ್ತೆಯಾಗಿರುವ ಬಗ್ಗೆ ಮೊಬೈಲ್​ಗೆ ಸಂದೇಶ ಬಂದಿದೆ.

ಶನಿವಾರಸಂತೆ ಪರಿಸರದಲ್ಲಿ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಕಳ್ಳ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ದ್ವಿಚಕ್ರ ವಾಹನವನ್ನು ಉಪ್ಪಿನಂಗಡಿಗೆ ತರಲಾಗಿದೆ. ಇದೆಲ್ಲವೂ ದೇವರ ಪವಾಡ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net