ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಹಾವು ಕಡಿತ

salmankhan-1582711053
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಕೈಗೆ ಹಾವು ಕಚ್ಚಿದೆ. ಪನ್ವೇಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್​ ಖಾನ್​ಗೆ ಶನಿವಾರ ಮಧ್ಯರಾತ್ರಿ ಹಾವು ಕಚ್ಚಿದೆ.

ಕೂಡಲೇ ಸಲ್ಮಾನ್ ಖಾನ್ ಅವರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷ ರಹಿತ ಹಾವಾಗಿದ್ದರಿಂದ ಸಲ್ಮಾನ್​ ಅವರ ಆರೋಗ್ಯದಲ್ಲಿ ಅಷ್ಟಾಗಿ ಬಾಧಿಸಿಲ್ಲ ಎಂದು ಮೂಲಗಳು ಹೇಳಿವೆ. ಸದ್ಯ ನಟ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net