

ಉತ್ತರಕನ್ನಡ: ಟೋಲ್ ಹಣ ಕಟ್ಟುವಂತೆ ಕೇಳಿದ ಸಿಬ್ಬಂದಿ ಮೇಲೆಯೇ ಪೊಲೀಸರು ಕೈ ಮಾಡಿದ್ದಾರೆ.
ಇಂತಹ ಘಟನೆ ಉತ್ತರಕನ್ನಡ ಜಿಲ್ಲೆ ಅಂಕೋಲಾದ ರಾ.ಹೆ. 66ರ ಹಟ್ಟಿಕೇರಿಯ ಟೋಲ್ ಗೇಟ್ನಲ್ಲಿ ಸಂಭವಿಸಿದೆ. ಖಾಸಗಿ ಕಾರಿಗೆ ಪೊಲೀಸ್ ಎಂದು ನಾಮಫಲಕ ಅಳವಡಿಸಿಕೊಂಡು ಬೆಂಗಳೂರಿನಿಂದ ಗೋವಾಕ್ಕೆ ಪೊಲೀಸರು ಕುಟುಂಬಸ್ಥರ ಜತೆ ಎರಡು ಕಾರಿನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದರು. ಟೋಲ್ಗೇಟ್ ಬಳಿ ಕಾರನ್ನ ತಡೆದ ಸಿಬ್ಬಂದಿ ಟೋಲ್ ಕಟ್ಟಿ ಎಂದಿದ್ದಕ್ಕೆ ಗರಂ ಆದ ಕಾರಿನಲ್ಲಿದ್ದವರು ಗಲಾಟೆ ಮಾಡಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಟೋಲ್ ಸಿಬ್ಬಂದಿ ಮೇಲೆ ಪೊಲೀಸರು ಕೈ ಮಾಡಿದ್ದಾರೆ. ಗಲಾಟೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.