ಬಯಲಿನಲ್ಲಿ ಆಡುತ್ತಲೇ 100 ಅಡಿ ಆಳದ ಕೊಳವೆ ಬಾವಿಗ ಬಿದ್ದ ಬಾಲಕ: ಸ್ಥಳಕ್ಕೆ ಧಾವಿಸಿದ ಎನ್​​ಡಿಆರ್​ಎಫ್​​ ತಂಡ

Borewell
Published on

ಚಂಡಿಗಢ: ಈ ಹಿಂದೆ ಕೊಳೆವೆ ಬಾವಿ ಪ್ರಕರಣಗಳು ಸಾಕಷ್ಟು ನಡೆದಿದ್ದರೂ, ಇನ್ನೂ ಎಚ್ಚೆತ್ತುಕೊಳ್ಳದಿರುವುದು ರಾಜಕೀಯ ವ್ಯವಸ್ಥೆಯನ್ನು ತೋರಿಸುತ್ತಿದೆ.

ಪಂಜಾಬ್​​ನ ಹೋಶಿರ್​ಪುರ ಜಿಲ್ಲೆಯ ಖೈಲಾ ಹಳ್ಳಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

100 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು, ರಕ್ಷಣಗೆ ಸೇನೆಯೂ ಧಾವಿಸಿದೆ. ಬಾಲಕನಿಗೆ ಆಕ್ಸಿಜನ್​ ನೀಡಲಾಗುತ್ತಿದ್ದು, ಜೆಸಿಬಿ ಮೂಲಕ ರಂದ್ರ ಕೊರೆದು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬಯಲಿನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ತಪ್ಪಿಸಿಕೊಳ್ಳಲು ಓಡಿಬಂದ ಬಾಲಕ ನೋಡದೇ ತೆರೆದ ಬಾವಿಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೊರತೆಗೆಯುವ ಕಾರ್ಯ ಚುರುಕುಗೊಳಿಸಲಾಗುತ್ತಿದೆ. ಕ್ಯಾಮೆರಾದಲ್ಲಿ ಮಗುವು ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬರುತ್ತಿದ್ದು, ಶೀಘ್ರ ಕಾರ್ಯಾಚರಣೆ ಮುಗಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net