ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊಗ್ಗಿನ ಮನಸ್ಸು ಬೆಡಗಿ ಶುಭಾ ಪೂಂಜಾ!

1214292
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ, ‘ಮೊಗ್ಗಿನ ಮನಸ್ಸು’ ಬೆಡಗಿ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ಪ್ರೀತಿಸುತ್ತಿದ್ದ ಸುಮಂತ್​ ಮಹಾಬಲ ಅವರ ಜತೆಯೇ ಶುಭಾ ಸರಳವಾಗಿ ಮದುವೆ ಆಗಿದ್ದು, ಆ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

ಮದುವೆಯ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಡಿರುವ ಶುಭಾ, 'ಇಂದು ನಾನು ಮತ್ತು ಸುಮಂತ್ ಮಹಾಬಲ ಇಬ್ಬರೂ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹ ಮಾಡಿಕೊಂಡೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ನಮ್ಮ ಮೇಲಿರಲಿ' ಎಂದು ಬರೆದುಕೊಂಡಿದ್ದಾರೆ. ಮುದ್ದಾದ ಈ ಜೋಡಿಗೆ ಅಭಿಮಾನಿಗಳು, ಚಿತ್ರರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಂಗಳೂರು ಮೂಲದ ಶುಭಾ ಪೂಂಜಾ ಅವರ ವರಿಸಿದ ಸುಮಂತ್ ಮಹಾಬಲ ಕೂಡ ಮಂಗಳೂರಿನವರು. ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಉಪಾಧ್ಯಕ್ಷ. ಬೆಂಗಳೂರಿನಲ್ಲಿ ಸ್ ಏಜೆನ್ಸಿಸ್ ಉದ್ಯಮವನ್ನೂ ನಡೆಸುತ್ತಿದ್ದಾರೆ.

ಒಂದೂವರೆ ವರ್ಷದಿಂದ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರಿಂದಲೂ ಕಳೆದ ವರ್ಷವೇ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಇದೀಗ ಇಬ್ಬರೂ ಹಸೆಮಣೆ ಏರಿದ್ದು, ಹೊಸ ಜೀವನ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net