ಅಪ್ಪು 'ಅಮರಶ್ರೀ'.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ: ಪದ್ಮಶ್ರೀ ಪ್ರಶಸ್ತಿ ಕುರಿತು ಶಿವಣ್ಣ ಪ್ರತಿಕ್ರಿಯೆ

puneethrajkumar shivarajkuamr
Published on

ಬೆಂಗಳೂರು: 'ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ.. ಯಾವ ಶ್ರೀ ಕೊಟ್ಟರು ದೊಡ್ಡದ್ದಲ್ಲ. ಅವನು ಅಮರ ಶ್ರೀ' ಎಂದು ಸಹೋದರ ಶಿವರಾಜ್​ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪುನೀತ್​ ನಿಧನರಾಗಿ ಇಂದಿಗೆ 11 ದಿನ. ಈ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ 11ನೇ ದಿನದ ಕಾರ್ಯವನ್ನ ಪುನೀತ್​ ಕುಟುಂಬಸ್ಥರು ನೆರವೇರಿಸಿದರು. ಬಳಿಕ ಪುನೀತ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಅಭಿಮಾನಿಗಳಿಂದ ಕೇಳಿ ಬರುತ್ತಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಿವಣ್ಣ, 'ಅವನು ಅಮರ ಶ್ರೀ... ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ. ಅವನು ಎಲ್ಲರ ಮನಸ್ಸಿನ್ನೂ ಶ್ರೀ ಆಗಿದ್ದಾನೆ, ಅದಕ್ಕಿಂದ ದೊಡ್ಡದು ಬೇರೆ ಯಾವುದೂ ಇಲ್ಲ' ಎಂದರು.

ಪುನೀತ್​ಗೆ ಜನರು ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಚಿಕ್ಕ ವಯಸ್ಸಿನಿಂದಲೂ ನಾವು ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆ ನೋಡಿ ಖುಷಿಪಟ್ಟವರು ನಾವು. ಅಪ್ಪು ಇನ್ನಿಲ್ಲ ಎಂಬುದನ್ನ ನನಗೇ ಒಪ್ಪಿಕೊಳ್ಳೋಕೆ ಆಗ್ತಿಲ್ಲ. ಅವನ ಅಗಲಿಕೆ ನೋವು ನಾನು ಬದುಕಿರೋವರೆಗೂ ಕಾಡುತ್ತಲೇ ಇದೆ. ಇನ್ನು ಅಭಿಮಾನಿಗಳಿಗೂ ಅಷ್ಟೇ ನೋವಾಗಿರುತ್ತೆ. ದಯವಿಟ್ಟು ಯಾರೂ ದುಡುಕಬೇಡಿ. ಆತ್ಮಹತ್ಯೆ ಅಂತಹ ಕೃತ್ಯಕ್ಕೆ ಕೈ ಹಾಕಬೇಡಿ. ನಿಮ್ಮ ಮನಸಲ್ಲೇ ಅಪ್ಪು ಇರ್ತಾನೆ. ಅವನ ಹೆಸರಲ್ಲಿ ಸಮಾಜ ಸೇವೆ ಮಾಡಿ. ಬಡವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಶಿವಣ್ಣ ಕೈಮುಗಿದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net