More

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನ ಕಲಕುತ್ತಲೇ ಇದೆ. ಅಪ್ಪು ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅಪ್ಪು ಲೈಫ್​ ಸ್ಟೈಲ್​ ಚೆನ್ನಾಗಿಯೇ ಇತ್ತು. ಆದರೂ ದಿಢೀರ್​ ಸಾವು ಹೇಗಾಯ್ತು? ಈ ಕುರಿತು ಸಿಬಿಐ ತನಿಖೆ ನಡೆಸಬೇಕು, ಡಾ.ರಾಜ್​ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸಬೇಕು ಎಂಬ ಆಗ್ರಹ ಈಗಾಗಲೇ ಕೇಳಿ ಬಂದಿದೆ. ಪುನೀತ್ ಅವರ ಸಾವಿನ ಕುರಿತು ಅನುಮಾನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. 4 ದಿನದ ಹಿಂದೆಯೇ ಡಾ.ರಾಜ್​ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸ್ ಠಾಣೆಗೆ ಕುರುಬರಹಳ್ಳಿಯ ಅರುಣ್​ ಪರಮೇಶ್ವರ್ ಎಂಬುವರು ದೂರು ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಇದೀಗ ಇದೇ ಪೊಲೀಸ್​ ಠಾಣೆಗೆ ಕನ್ನಡ ಜನಪರ ಚಿಂತಕ ಡಾ. ಆರ್. ಪ್ರಸಾದ್ ಎಂಬುವರು ದೂರು ನೀಡಿದ್ದು, ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್​ ಅವರಿಗೆ ಇಸಿಜಿ ಮಾಡಿದಾಗ ಹೃದಯಾಘಾತ ಆಗುವ ಸೂಚನೆ ಕಂಡರೂ ವೈದ್ಯರು ನಿರ್ಲಕ್ಷಿಸಿದ್ದಾರೆ. ಸಮೀಪದಲ್ಲೇ ಇರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಹೃದಯಘಟಕಕ್ಕೆ ಕಳಿಸಬಹುದಿತ್ತು. ದೂರದ ವಿಕ್ರಂ ಆಸ್ಪತ್ರೆಗೆ ಕಳಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸ್ಲೋ ಪಾಯಿಸನ್​ ಆಗಿರುವ ಸಾಧ್ಯತೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.

    ಅ.29ರ ಬೆಳಗ್ಗೆ 11ರ ನಂತರ ರಮಣರಾವ್​ ಅವರ ಕ್ಲಿನಿಕ್​ಗೆ ಪುನೀತ್​ ಅವರು ಭೇಟಿ ಕೊಟ್ಟಾಗ ಅವರಿಗೆ ಹೃದಯಾಘಾತ ಆಗುವ ಮುನ್ಸೂಚನೆ ಇದ್ದರೂ ವೈದ್ಯ ರಮಣರಾವ್​ ಅವರು ಹತ್ತಿರದ ಎಂ.ಎಸ್.​ರಾಮಯ್ಯ ಆಸ್ಪತ್ರೆಯ ಪ್ರತ್ಯೇಕ ಹೃದಯ ಆರೈಕೆ ಘಟಕಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿ ಅಲ್ಲಿನ ಸ್ಪೆಷಲ್​ ಕಾರ್ಡಿಯಾಲಜಿ ವಿಭಾಗಕ್ಕೆ ಕಳುಹಿಸಬಹುದಿತ್ತು. ಆದರೆ, ಇಲ್ಲಿಗೆ ಕಳುಹಿಸದೆ ಕನ್ಸಲ್ಟೆಂಟ್​ ಡಾಕ್ಟರ್​ಗಳಿರುವ ಹೃದಯ ಸಂಬಂಧಿ ಪ್ರತ್ಯೇಕ ವಿಭಾಗ ಇರದ ವಿಕ್ರಂ ಆಸ್ಪತ್ರೆಗೆ ಏಕೆ ಕಳುಹಿಸಿದರು. ಹೃದಯ ಸಂಬಂಧಿ ತುರ್ತು ವಿಚಾರ ಬಂದಾಗ ಹತ್ತಿರದ ಆಸ್ಪತ್ರೆಗೆ ಕಳುಹಿಸುವ ವೈದ್ಯಕೀಯ ಪ್ರಜ್ಞೆಯನ್ನ ಪ್ರದರ್ಶಿಸಬೇಕಿದ್ದ ಡಾ.ರಮಣರಾವ್​ ನಿರ್ಲಕ್ಷಿಸಿ ಅಪ್ಪು ಸಾವಿಗೆ ಕಾರಣರಾಗಿದ್ದಾರೆ ಎಂದು ಕನ್ನಡ ಜನಪರ ಚಿಂತಕ ಡಾ. ಆರ್. ಪ್ರಸಾದ್ ದೂರಿನಲ್ಲಿ ವಿವರಿಸಿದ್ದಾರೆ.

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ... ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ...

    ಪುನೀತ್​ ರಾಜ್​ಕುಮಾರ್​ ಅವರ ಅಸಹಜ ಸಾವಿಗೆ ಕಾರಣರಾಗಿರುವ ಡಾ. ರಮಣರಾವ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಪುನೀತ್​ ಸಾವಿಗೂ ಮುನ್ನ 2 ದಿನ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಸೇವಿಸಿದ್ದ ಊಟ-ನೀರಿನಿಂದ ಆಗಿರಬಹುದಾದ ಸ್ಲೋ ಪಾಯಿಸನ್​ ಬಗೆಗಿನ ಸತ್ಯಾಸತ್ಯತೆಗಳನ್ನೂ ತಿಳಿಸುವಂತೆ ನಾಡಿನ ಜನತೆ ಪರವಾಗಿ ದೂರು ಕೊಡುತ್ತಿದ್ದೇನೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸಬೇಕಾಗಿ ತಮ್ಮಲ್ಲಿ ವಿನಂತಿ. ನಾಡಿಗೆ ಬೇಕಾಗಿದ್ದ ಒಬ್ಬ ಹೃದಯಸ್ಪರ್ಶಿ ವ್ಯಕ್ತಿಯ ಸಾವು ರಹಸ್ಯವಾಗಿ ಉಳಿಯಬಾರದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಡಾ. ಆರ್. ಪ್ರಸಾದ್ ಆಗ್ರಹಿಸಿದ್ದಾರೆ.

    ಹತ್ತಿರದಲ್ಲಿರುವ ಎಂ.ಎಸ್. ರಾಮಯ್ಯಗೆ ಅಪ್ಪು ಅವರನ್ನ ಕಳಿಸದೆ ವಿಕ್ರಂ ಆಸ್ಪತ್ರೆಗೆ ರಮಶ್ರೀ ಆಸ್ಪತ್ರೆ ವೈದ್ಯರು ಕಳಿಸಿದ್ದಾರೆ. ಹೃದಯಾಘಾತವಾಗುವ ಮುನ್ಸೂಚನೆ ಕಂಡರೂ ವೈದ್ಯ ರಮಣರಾವ್​ ವೈಜ್ಞಾನಿಕ ರೀತಿಯಲ್ಲಿ ಜೊತೆಯಾಗಿ ಎಂ.ಎಸ್​.ರಾಮಯ್ಯ ಹೃದಯ ಘಟಕಕ್ಕೆ ಕರೆದೊಯ್ಯದೆ ಹೃದಯಕ್ಕೆ ತುರ್ತು ಸಂದರ್ಭದಲ್ಲಿ ಪ್ರಣಹಾನಿ ಸಂಭವಿಸಲು ಕಾರಣರಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಆ ಮೂಲಕ ಪುನೀತ್​ ರಾಜ್​ಕುಮಾರ್​ ಅವರ ಅಸಹಜ ಸಾವಿಗೆ ಡಾ. ರಮಣರಾವ್​ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಡಾ.ಆರ್​. ಪ್ರಸಾದ್​, ಆ ಕ್ಷಣ ರಮಣರಾವ್​ ಅವರು ವೈದ್ಯಕೀಯ ಪ್ರಜ್ಞೆ ಪ್ರದರ್ಶಿಸಿದ್ದರೆ ಅಪ್ಪು ಸಾವನ್ನ ತಡೆಯಬಹುದಿತ್ತು ಎಂದಿದ್ದಾರೆ.

    ಪುನೀತ್​ ಆತ್ಮದ ಜತೆ ಮಾತನಾಡಿದ್ದಾಗಿ ವಿಡಿಯೋ ಅಪ್​ಲೋಡ್​ ಮಾಡಿದ ವ್ಯಕ್ತಿಗೆ ಅಭಿಮಾನಿಗಳಿಂದ ಛೀಮಾರಿ

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಇಂದು 11ನೇ ದಿನದ ಪುಣ್ಯತಿಥಿ: ನೋವು ತುಂಬಿದ ಮನದಲ್ಲೇ ಪರೀಕ್ಷೆ ಬರೆಯಲು ಹೊರಟ ಪುನೀತ್​ರ ಕಿರಿ ಮಗಳು

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts