ನಮ್ಮದು 'ಶಿವಸೇನೆ ಬಾಳಾ ಸಾಹೇಬ್​ ಪಕ್ಷ' ಎಂದ ಶಿಂಧೆ ಬಣ: ಬಂಡಾಯ ಶಾಸಕರ ಕಚೇರಿ ಮೇಲೆ ದಾಳಿ

Eknath Sindhe
Published on

ಮುಂಬೈ: ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕರ ಕಚೇರಿಗಳ ಮೇಲೆ ಶಿವಸೇನೆ ಪಕ್ಷದ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪುಣೆಯಲ್ಲಿರುವ ಶಾಸಕ ತನಾಜಿ ಸಾವಂತ್ ಅವರ​ ಕಚೇರಿಯನ್ನೂ ಧ್ವಂಸ ಮಾಡಲಾಗಿದೆ. ಅತ್ತ ಬಂಡಾಯ ಶಾಸಕರು ನಮ್ಮದು 'ಶಿವಸೇನಾ(ಬಾಳಾ ಸಾಹೇಬ್​) ಪಕ್ಷ' ಎಂದು ಘೋಷಿಸಿಕೊಂಡಿದ್ದಾರೆ. ಆ ಮೂಲಕ ಶಿವಸೇನೆ ಪಕ್ಷವನ್ನೇ ಹೈಜಾಕ್​ ಮಾಡಲು ಯತ್ನಿಸುತ್ತಿದ್ದಾರೆ. ಉದ್ಧವ್​ ಠಾಕ್ರೆ ಅವರ ತಂದೆ ಬಾಳಾ ಸಾಹೇಬ್​ ಠಾಕ್ರೆ ಕಟ್ಟಿದ್ದ ಪಕ್ಷವನ್ನೇ ಇದೀಗ ನಮಗೆ ಕೊಡಿ ಎಂದು ಶಿಂಧೆ ಕೇಳುತ್ತಿರುವುದು ಉದ್ಧವ್​ಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಶಿವಸೇನೆ ನಾಯಕ, ಸಚಿವ ಏಕನಾಥ್​ ಶಿಂಧೆ ನೇತೃತ್ವದಲ್ಲಿ ಎದ್ದಿರುವ ಬಂಡಾಯ ಠಾಕ್ರೆ ಸರ್ಕಾರವನ್ನ ಪತನದ ಹಂಚಿಗೆ ದೂಡಿದೆ. ನಿಜವಾಗಿಯೂ ನಿಮಗೆಲ್ಲಾ ಶಿವಸೇನೆ ಪಕ್ಷದ ಮೇಲೆ ನಿಷ್ಠೆ ಇದ್ದರೆ ವಾಪಸ್​ ಬನ್ನಿ ಎಂದು ಶಿಂಧೆ ತಂಡಕ್ಕೆ ಉದ್ಧವ್​ ಠಾಕ್ರೆ ಆಹ್ವಾನಿಸಿದ್ದರಾದರೂ ಅವರೆಲ್ಲರೂ ಗುವಾಹಟಿಯ ಹೋಟೆಲ್​ನಲ್ಲೇ ಇದ್ದು, ನಮ್ಮದು 'ಶಿವಸೇನಾ(ಬಾಳಾ ಸಾಹೇಬ್​)' ತಂಡ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಠಾಕ್ರೆ ಅವರು ಇಂದು ಮಧ್ಯಾಹ್ನ ಶಿವಸೇನೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net