

ಶಿವಮೊಗ್ಗ: ಹಿಜಾಬ್ ಗಲಾಟೆ ನಡುವೆಯೂ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ಪಿಎಫ್ಐ ಡೇ ಆಚರಿಸಲಾಗಿದೆ.
ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗ ನಗರದ ಹತ್ತಕ್ಕೂ ಹೆಚ್ಚು ಕಡೆ ಪಿಎಫ್ಐ ಕಾರ್ಯಕರ್ತರು ಧ್ವಜಾರೋಹಣ ನೆರವೇರಿಸಿ ಪಿಎಫ್ಐ ದಿನ ಆಚರಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಐದಕ್ಕಿಂತ ಹೆಚ್ಚು ಜನ ಸೇರದಂತೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಆದರೂ ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದ ರಾಗಿಗುಡ್ಡ, ಬೈಪಾಸ್ ರಸ್ತೆಯ ಮಸೀದಿ ಬಳಿ, ಕೆ.ಆರ್.ಪುರಂನ ಜೀ ಕಾರ್ನರ್ ಸೇರಿದಂತೆ ಹಲವೆಡೆ ಪಿಎಫ್ಐ ದಿನ ಆಚರಿಸಲಾಗಿದೆ.