ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ... ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

renukacharya
Published on

ಬೆಂಗಳೂರು: ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಕಿಚಾಯಿಸಿದ ಸಂಗತಿ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು.

ಬುಧವಾರ ಕಲಾಪದ ನಡುವೆ ಯಡಿಯೂರಪ್ಪ ಮೊಗಸಾಲೆಯಲ್ಲಿ ಕುಳಿತಿದ್ದರು. ಹಲವು ಶಾಸಕರು ಅಲ್ಲಿಗೆ ಆಗಮಿಸಿ ನಮಸ್ಕರಿಸಿ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರೇಣುಕಾಚಾರ್ಯ ಕೂಡ ಅಲ್ಲಿಗೆ ಬಂದು ನಮಸ್ಕರಿಸಿದರು.

ರೇಣುಕಾಚಾರ್ಯರನ್ನು ಕಂಡೊಡನೆ, ಸಲುಗೆಯಿಂದ ಏನೋ ನೀನು ದಿನಾ ಒಳ್ಳೆ ಜಮೀರ್​ ಆಡಿದಂಗೆ ಆಡ್ತೀಯಲ್ಲೋ ಎಂದು ಮಾತಲ್ಲೇ ತಿವಿದರು. ರೇಣುಕಾಚಾರ್ಯ ಮಾತ್ರ ದೊಡ್ಡದಾಗಿ ನಗುತ್ತಾ ಪಕ್ಕಕ್ಕೆ ಬಂದು ನಿಂತರು. ಇತ್ತೀಚೆಗೆ ರೇಣುಕಾಚಾರ್ಯರ ಹೇಳಿಕೆ ಮತ್ತು ನಡವಳಿಕೆಯನ್ನು ಜಮೀರ್​ ಅಹ್ಮದ್​ಗೆ ಹೋಲಿಸಿ ಬಿಎಸ್​ವೈ ಚಿವುಟಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net