More

    ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

    ವಿಜಯಪುರ: ಮನೆಯವರ ವಿರೋಧದ ನಡುವೆಯೂ ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದ ಮಾಜಿ ಕಾರ್ಪೋರೇಟರ್​ರ ಮಗಳು ಮತ್ತು ಪಿಎಸ್​ಐ ಪುತ್ರನ ಲವ್​ ಸ್ಟೋರಿ ಪ್ರೇಮಿಗಳ ದಿನದ ಮರುದಿನವೇ ದುರಂತ ಅಂತ್ಯ ಕಂಡಿದೆ. ಹಾಡಹಗಲೇ ವಿಜಯಪುರ ನಗರದಲ್ಲಿ ಅಳಿಯನನ್ನೇ ಮಾವ ಕಡೆಯವರು ಹತ್ಯೆ ಮಾಡಿದ್ದು, ಗಂಡನನ್ನು ಕಳೆದುಕೊಂಡ 5 ತಿಂಗಳ ಗರ್ಭಿಣಿ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಮುಸ್ತಕಿನ್ ಕೂಡಗಿ(28) ಮೃತ ದುರ್ದೈವಿ. ಇವರ ತಂದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್​ಎಸ್​ ರಿಯಾಜ್ ಅಹಮದ್​. ಇವರ ಸಂಬಂಧಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್‌ ಶೇಖ್​ರ ಮಗಳು ಅತೀಕಾಳನ್ನು ಮುಸ್ತಕಿನ್ ಕೂಡಗಿ ಪ್ರೀತಿಸುತ್ತಿದ್ದ. ಇಬ್ಬರೂ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ತಂದೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ 6 ತಿಂಗಳ ಹಿಂದೆ ಮದ್ವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಗರ್ಭಿಣಿಯಾದ ಪತ್ನಿಯನ್ನು ಇತ್ತೀಚಿಗೆ ಊರಿಗೆ ವಾಪಸ್​ ಕರೆದುಕೊಂಡು ಬಂದು ತನ್ನ ಮನೆಯಲ್ಲೇ ವಾಸವಿದ್ದ.

    ಇಂದು(ಮಂಗಳವಾರ) ಹಾಡುಹಗಲೇ ವಿಜಯಪುರ ನಗರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಸಿನಿಮೀಯ ರೀತಿಯಲ್ಲಿ ಮುಸ್ತಕಿನ್ ಕೂಡಗಿ ಅವರನ್ನ ದುಷ್ಕರ್ಮಿಗಳು ಕೊಂದಿದ್ದಾರೆ. ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡ ಮಾವನೇ ಅಳಿಯನನ್ನು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ನಿರ್ಮಾಣ ಹಂತದ ಮನೆ ಬಳಿಗೆ ಬೈಕ್​ನಲ್ಲಿ ಮುಸ್ತಕಿನ್​ ಹೋಗುತ್ತಿದ್ದರು. ಈ ವೇಳೆ ಬೈಕ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದ್ವೆಯಾದ ಬಳಿಕ ಮುಸ್ತಕಿನ್​ನ ಕೊಲೆಗೆ ಹಲವು ಬಾರಿ ಯತ್ನ ನಡೆದಿತ್ತಂತೆ. ಮದ್ವೆಯಾದ ಹೊಸತರಲ್ಲಿ ವಿಡಿಯೋ ಮಾಡಿದ್ದ ಅತೀಕಾ, ನನ್ನ ತಂದೆ ಹಾಗೂ ಸಹೋದರರಿಂದ ನನ್ನ ಪ್ರಿಯಕರ ಮುಸ್ತಕೀನ್ ಮತ್ತು ಇವರ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೂ, ಮುಸ್ತಕಿನ್​ ಮತ್ತು ನನ್ನ ಮಾವನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಳಲು ತೋಡಿಕೊಂಡಿದ್ದರು. ದಯವಿಟ್ಟು ನಮ್ಮನ್ನುಬದುಕಲು ಬಿಡಿ ಎಂದು ಅಪ್ಪನನ್ನ ಮಗಳು ಅತೀಕಾ ಬೇಡಿಕೊಂಡಿದ್ದಳು. ಪ್ರೀತಿಸಿ ಮದುವೆ ಆಗಿದ್ದನ್ನು ಸಹಿಸದ ಅವರು ಮಗಳ ಬಾಳಿಗೆ ಕೊಳ್ಳಿ ಇಟ್ಟಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಹನ ಹಾಯಿಸಿ ಬಳಿಕ ಯುವಕನನ್ನು ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದೇ ತಿಳಿಯಲಾಗಿತ್ತು. ಆದರೆ, ಕೂಲಂಕುಷವಾಗಿ ತನಿಖೆ ನಡೆಸಲಾಗಿ ಇದೊಂದು ಉದ್ದೇಶ ಪೂರ್ವ ಕೃತ್ಯ ಎಂಬುದು ಕಂಡುಬಂದಿದೆ ಹತ್ಯೆಯಾಗಿರುವ ಮುಸ್ತಕಿನ್ ಲವ್ ಮ್ಯಾರೇಜ್ ಆಗಿದ್ದ. ಆತನ ಸಂಬಂಧಿಕರಿಂದಲೇ ಹತ್ಯೆ ಆಗಿದ್ದು, ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಆರೀಫ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಆನಂದಕುಮಾರ ತಿಳಿಸಿದ್ದಾರೆ.

    ಹಾವೇರಿಯಲ್ಲಿ ಭೀಕರ ಅಪಘಾತ: ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು, ಕಾರಲ್ಲಿದ್ದ ಶಿಕ್ಷಕ ದುರ್ಮರಣ

    ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ

    ಗಂಟೆ ಶಬ್ದ: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts