ಎಸ್​ಡಿಎ ಪರೀಕ್ಷೆ: ಕೀ ಉತ್ತರ ಪ್ರಕಟಿಸಿದ ಕೆಪಿಎಸ್ಸಿ

KPSC
Published on

ಬೆಂಗಳೂರು: ಸೆ.19ರಂದು ನಡೆದಿದ್ದ ಎಸ್​ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರವನ್ನ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್​ಸಿ) ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್ ಸಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆ. 19ರಂದು ಪರೀಕ್ಷೆ ನಡೆಸಿತ್ತು. ಇದೀಗ ಪ್ರಶ್ನೆಗಳ ಸರಿಯುತ್ತರಗಳನ್ನು ಕೆಪಿಎಸ್ಸಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

2020ರ ಮೇ 14ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆ ನಡೆದಿದೆ. ವಿಷಯ ಸಂಕೇತ 413, 414 ಹಾಗೂ 415ರ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿದೆ. ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗಳನ್ನು ದಾಖಲಿಸಬೇಕಿದ್ದು, ಸೆ.29 ಕೊನೆಯ ದಿನ. ವಿವರಗಳಿಗೆ http://kpsc.kar.nic.in/ ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net