More

    ವಿದ್ಯಾರ್ಥಿ ಬಸ್​ಪಾಸ್ ಅವಧಿ ವಿಸ್ತರಣೆ: ನವೆಂಬರ್​ವರೆಗೂ ಉಚಿತ ಪ್ರಯಾಣ

    ಬೆಂಗಳೂರು: ವಿದ್ಯಾರ್ಥಿ ಬಸ್​ಪಾಸ್ ಅವಧಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್​ಆರ್​ಟಿಸಿ) ವಿಸ್ತರಿಸಿದೆ.

    ಬಹುತೇಕ ವಿದ್ಯಾರ್ಥಿಗಳಿಗೆ ನವೆಂಬರ್​ವರೆಗೆ ಪರೀಕ್ಷೆಗಳು ನಡೆಯಲಿದೆ. ಹಾಗಾಗಿ ಕಳೆದ ಸಾಲಿನ ವಿದ್ಯಾರ್ಥಿ ಬಸ್​ಪಾಸ್ ಅವಧಿಯನ್ನು ನವೆಂಬರ್​ವರೆಗೂ ಕೆಎಸ್​ಆರ್​ಟಿಸಿ ವಿಸ್ತರಿಸಿದೆ. ಅಕ್ಟೋಬರ್​ನಲ್ಲಿ ಡಿಪ್ಲೊಮಾ, ಬಿ.ಇಡಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ. ಈ ಮೂರು ಕೋರ್ಸ್​ಗಳ ಪರೀಕ್ಷೆಗಳು ನವೆಂಬರ್ ತಿಂಗಳಿಗೆ ಮುಂಚಿತವಾಗಿ ಮುಗಿದರೆ, ಪರೀಕ್ಷಾ ಅವಧಿವರೆಗೆ ಮಾತ್ರ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವಿದ್ಯಾರ್ಥಿಗಳು ಪಾಸ್ ಕೌಂಟರ್​ಗಳಲ್ಲಿ ಅವಧಿ ವಿಸ್ತರಣೆಯ ಸಹಿ ಹಾಗೂ ಮೊಹರು ಪಡೆದುಕೊಳ್ಳಬೇಕು.

    ಈಗಾಗಲೇ ಪ್ರಸಕ್ತ ಸಾಲಿನ ವಿದ್ಯಾರ್ಥಿ ಬಸ್​ಪಾಸ್ ಪಡೆಯಲು ಸೇವಾ ಸಿಂಧು ವೆಬ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪಾಸ್ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡುವ ಸಂಬಂಧ ಕಳೆದ ಸಾಲಿನ ಬಸ್ ಪಾಸ್ ಅಥವಾ ಶಾಲಾ-ಕಾಲೇಜು ದಾಖಲಾತಿಯ ಶುಲ್ಕ ರಶೀದಿ ತೋರಿಸಿ ಸೆ.25ರ ವರೆಗೆ ನಿಗಮದ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

    ನ್ಯಾಕ್​ ಮಾನ್ಯತೆಯಲ್ಲಿ A+ ಗ್ರೇಡ್​ ಕಳೆದುಕೊಂಡ ಮೈಸೂರು ವಿಶ್ವವಿದ್ಯಾಲಯ!

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts