ಕುಶಲಕರ್ವಿುಗಳಿಗೆ ಸಂಕ್ರಾಂತಿ ಗಿಫ್ಟ್; 15 ಸಾವಿರ ರೂ. ಸಹಾಯಧನದೊಂದಿಗೆ 50 ಸಾವಿರ ರೂ. ನೆರವು

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿರುವ ಸಣ್ಣ ಸಣ್ಣ ಕುಶಲಕರ್ವಿುಗಳಿಗೆ ಆರ್ಥಿಕ ನೆರವು ಕಲ್ಪಿಸುವ ಮೂಲಕ ಸಂಕ್ರಾಂತಿ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯ ಕರಕುಶಲ ನಾಡೆಂದು ಹೆಸರು ಪಡೆದಿದೆ. ರಾಜ್ಯದ ಉದ್ದಗಲಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕುಲಶಕರ್ವಿುಗಳು ವಿವಿಧ ಕಲೆಗಳನ್ನು ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದಾರೆ. ಆದರೆ, ಇವರೆಲ್ಲ ಆರ್ಥಿಕ ಭದ್ರತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಶಲ

ಕರ್ವಿುಗಳಿಗೆ ದುಡಿಯುವ ಬಂಡವಾಳ ಮತ್ತು ತಮ್ಮ ಕೌಶಲದ ಚಟುವಟಿಕೆಗಳನ್ನು ಮುಂದುವರಿಸಲು ಆರ್ಥಿಕ ಉತ್ತೇಜನದ ಕೊರತೆ ಇರುವುದರಿಂದ ಬಹಳಷ್ಟು ಜನ ಕಸುಬಿನಿಂದ ಹಿಂದೆ ಸರಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕರಕುಶಲಕರ್ವಿುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕಚ್ಚಾ ಪದಾರ್ಥಗಳನ್ನು ಖರೀದಿಸುವುದು ಬಡತನದಲ್ಲಿಯೇ ಇರುವ ಕುಶಲಕರ್ವಿುಗಳಿಂದ ಸಾಧ್ಯ ವಾಗುತ್ತಿಲ್ಲ. ಹೀಗಾಗಿ ಕಲೆ ನಶಿಸಿ ಹೋಗ ಬಾರದೆಂಬ ಕಾರಣ ದಿಂದಲೇ ಸರ್ಕಾರ ಇಂತಹ ಮಹತ್ವದ ತೀರ್ವನಕ್ಕೆ ಬಂದಿದೆ. ಸಿಎಂ ಬೊಮ್ಮಾಯಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿಯೂ ಕುಶಲಕರ್ವಿುಗಳಿಗೆ ನೆರವು ನೀಡು ವುದನ್ನು ಪ್ರಸ್ತಾಪಿಸಿದ್ದರು. ಸಣ್ಣ ಕೈಗಾರಿಕಾ ಇಲಾಖೆ ಇದೀಗ ಯೋಜನೆ ಸಿದ್ಧಪಡಿಸಿಕೊಂಡಿದೆ.

ಸಮಸ್ಯೆಗಳು: ಕುಶಲಕರ್ವಿುಗಳು ಐದು ರೀತಿಯ ಸಮಸ್ಯೆ ಎದುರಿಸುತ್ತಿರುವುದನ್ನು ಸಣ್ಣ ಕೈಗಾರಿಕೆ ಇಲಾಖೆ ಗುರುತಿಸಿದೆ. ಅದರಲ್ಲಿ ಪ್ರಮುಖವಾಗಿ ಹಣಕಾಸಿನ ಲಭ್ಯತೆ, ದುಡಿಯುವ ಬಂಡವಾಳ, ಸಾಲಸೌಲಭ್ಯ, ಹೊಸ ವಿನ್ಯಾಸ ಹಾಗೂ ಮಾರುಕಟ್ಟೆ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡುತ್ತಿದೆ. ಕರಕುಶಲ ನಿಗಮದ ಕಾವೇರಿ ಎಂಪೋರಿಯಮ್ಲ್ಲಿ ಮಾರಾಟದ ಜತೆಗೆ ಹೆಚ್ಚು ಹೆಚ್ಚು ಮೇಳಗಳನ್ನು ನಡೆಸುವ ಮೂಲಕ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸಲಿದೆ.

ಉದ್ಯೋಗ ಸೃಷ್ಟಿ: ಬಹುತೇಕ ಕುಶಲಕರ್ವಿುಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಇವರಿಗೆ ದುಡಿಯುವ ಬಂಡವಾಳ ಹಾಗೂ ಮಾರುಕಟ್ಟೆ ಸೌಲಭ್ಯ ನೀಡಿದರೆ ಅದರಿಂದ ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಆದರೆ, ಸೃಷ್ಟಿಯಾಗುವ ಉದ್ಯೋಗಗಳ ಸಂಖ್ಯೆ ಎಷ್ಟು ಎಂಬುದನ್ನು ಸದ್ಯಕ್ಕೆ ಹೇಳಲಾಗದು ಎಂದು ಮೂಲಗಳು ಅಭಿಪ್ರಾಯಪಡುತ್ತವೆ.

ವಿನಾಯ್ತಿ: ಯೋಜನೆಯ ಫಲ ಪಡೆಯುವ ಕುಶಲಕರ್ವಿುಗಳಿಗೆ ಬ್ಯಾಂಕ್​ಗಳಲ್ಲಿ ದಾಖಲಾತಿ ಶುಲ್ಕ, ಪ್ರಕ್ರಿಯೆ ಶುಲ್ಕ, ಮುಂಗಡ ಶುಲ್ಕಗಳಿಂದ ವಿನಾಯ್ತಿ ನೀಡಲಾಗುತ್ತದೆ.

ಎಷ್ಟು ನೆರವು?: ಪ್ರತಿ ಕುಶಲಕರ್ವಿುಗೆ ತಲಾ 50 ಸಾವಿರ ರೂ.ಗಳ ದುಡಿಯುವ ಬಂಡವಾಳ ನೀಡಲಿದೆ. ಅದರಲ್ಲಿ ಸರ್ಕಾರ 15 ಸಾವಿರ ರೂ.ಗಳ ಸಹಾಯಧನ ನೀಡುತ್ತದೆ. ಉಳಿದ 35 ಸಾವಿರ ರೂ.ಗಳನ್ನು ಬ್ಯಾಂಕ್​ಗಳ ಮೂಲಕ ಸಾಲ ಕೊಡಿಸಲಿದೆ. ಸಾಲ ಇದ್ದಲ್ಲಿ ಕುಶಲಕರ್ವಿುಗಳಿಗೂ ಬದ್ಧತೆ ಇರುತ್ತದೆ. ಪಡೆದ ಸಾಲಕ್ಕೆ ಉತ್ತರದಾಯಿತ್ವ ಇರುತ್ತದೆ ಎಂಬ ಕಾರಣದಿಂದಲೇ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬ್ಯಾಂಕ್ ಪ್ರಕ್ರಿಯೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಫೆಬ್ರವರಿ 1ಕ್ಕೆ ಕುಶಲಕರ್ವಿುಗಳ ಕೈಯಲ್ಲಿ ದುಡಿಯುವ ಬಂಡವಾಳ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ನಿರ್ಧಾರವಾಗಿದೆ. ಅಧಿಕಾರಿಗಳಿಗೂ ಅದೇ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ.

ಕುಶಲಕರ್ವಿುಗಳ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಅವರ ಸಮಗ್ರ ಬೆಳವಣಿಗೆಯಾಗಬೇಕು ಎಂಬುದು ಸಿಎಂ ಉದ್ದೇಶವಾಗಿದೆ. ಕುಶಲಕರ್ವಿು ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುಕೂಲಕರ ವಾತಾವರಣ ನಿರ್ವಣ, ಬೆಂಬಲಕ್ಕೆ ಪೂರಕ ವಾಗುವಂತಹ ಯೋಜನೆ ರೂಪಿಸಲಾಗಿದೆ. | ಎಂ.ಟಿ.ಬಿ. ನಾಗರಾಜು ಸಣ್ಣ ಕೈಗಾರಿಕೆ ಸಚಿವ

ಯಾರಿಗೆ ಅನುಕೂಲ?: ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯಲ್ಲಿ ನೋಂದಾಯಿಸಿ ಕೊಂಡಿರುವ 30 ಸಾವಿರ ಕುಶಲಕರ್ವಿುಗಳು ರಾಜ್ಯದಲ್ಲಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ 2,500 ಜನ ನೋಂದಾಯಿಸಿ ಕೊಂಡಿದ್ದಾರೆ. ಭೌಗೋಳಿಕ ಸೂಚಕಗಳ ಗುರುತು ಹೊಂದಿರುವ ಕುಶಲಕರ್ವಿುಗಳೂ ಇದ್ದಾರೆ. ಎರಡೂ ಕಡೆ ನೋಂದಾಯಿಸಿಕೊಳ್ಳದ ಕುಶಲಕರ್ವಿುಗಳು ಎಲೆಮರೆಯ ಕಾಯಿಯಂತೆ ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ.

ಷರತ್ತುಗಳೇನು?

  • ಕುಶಲಕರ್ವಿುಗೆ 18 ವರ್ಷ ತುಂಬಿರಬೇಕು
  • ಬ್ಯಾಂಕ್ ಸಾಲಕ್ಕೆ ಮಾತ್ರ ಸಹಾಯಧನ
  • ಒಂದು ಅವಧಿಗೆ ಮಾತ್ರ ನೆರವು
  • ಆನ್​ಲೈನ್​ನಲ್ಲಿಯೇ ಅರ್ಜಿಗಳ ಆಹ್ವಾನ
  • ಪಿಡಿಒಗಳಿಂದ ಕುಶಲಕರ್ವಿು ಪ್ರಮಾಣಪತ್ರ ಕಡ್ಡಾಯ
  • ಯೋಜನಾ ವರದಿ ಸಲ್ಲಿಕೆ
  • ಜಿಲ್ಲಾ ಮಟ್ಟದಲ್ಲಿ ಜಿಪಂ ಸಿಇಒ ನೇತೃತ್ವದಲ್ಲಿ ಆಯ್ಕೆ ಸಮಿತಿ

ಯಾವ ಕುಶಲಕರ್ವಿುಗಳು?

  • ಕಮ್ಮಾರಿಕೆ
  • ಬುಟ್ಟಿ ಹೆಣೆಯುವವರು
  • ಆಭರಣ ತಯಾರಿಕೆ
  • ಶ್ರೀಗಂಧ ಕೆತ್ತನೆ
  • ಮೈಸೂರು ರೋಸ್​ವುಡ್ ಕೆತ್ತನೆ
  • ಚನ್ನಪಟ್ಟಣದ ಮೆರಗು ಆಟಿಕೆ
  • ಬಿದರಿ ವೇರ್
  • ಕಿನ್ನಾಳ ಆಟಿಕೆ
  • ನವಲಗುಂದ ರತ್ನಗಂಬಳಿ
  • ಮುಂಡಗೋಡ ಫೈಲ್ ಕಾಫಿನಟ್
  • ಕಲ್ಲಿನ ಕೆತ್ತನೆ
  • ಮರದ ಕೆತ್ತನೆ
  • ಮೈಸೂರು ಸಾಂಪ್ರದಾಯಿಕ ಚಿತ್ರಕಲೆ
  • ಗಂಜೀಫಾ ಕಲೆ
  • ಕುಂಬಾರಿಕೆ, ಟೆರಾ›ಕೋಟ, ಮಣ್ಣಿನ ವಿಗ್ರಹ
  • ಲೋಹದ ಕರಕುಶಲ
  • ಬೆತ್ತ ಮತ್ತು ಬಿದಿರು
  • ಸಂಡೂರು ಲಂಬಾಣಿ ಕಸೂತಿ
  • ಕಸೂತಿ ಕಲೆ
  • ಕೋಕೋನೆಟ್ ಶೆಲ್ ಕ್ರಾಫ್ಟ್
  • ಕಂಬಳಿ ನೇಯ್ಗೆ
  • ಚಾಪೆ ಹೆಣೆಯುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net