ರೋಹಿತ್​ ವೇಮುಲ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ! ಆದರೂ ಮೋದಿ ವಿರುದ್ಧ ಆರೋಪ ಬಂದಿದ್ದೇಕೆ?

rohith vemula
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಂಡರೆ ಪ್ರತಿಕ್ಷಗಳಿಗೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಿದೆ. ಪ್ರತಿಯೊಂದಕ್ಕೂ ಮೋದಿ ಅವರನ್ನೇ ಬ್ಲೇಮ್​ ಮಾಡ್ತಾರೆ ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, 2016ರ ಜನವರಿ 17ರಂದು ನಡೆದಿದ್ದ ಹೈದರಾಬಾದ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್​ ವೇಮುಲ ಆತ್ಮಹತ್ಯೆ ಪ್ರಕರಣವನ್ನ ನೆನಪಿಸಿಕೊಂಡಿದ್ದಾರೆ.

ರೋಹಿತ್​ ವೇಮುಲ ಆತ್ಮಹತ್ಯೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ದಿನಕ್ಕೊಂದು ತಿರುವು ಪಡೆದುಕೊಂಡಿತ್ತಲ್ಲದೇ ಈ ಸಾವಿನ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪಿಎಚ್​ಡಿ ಓದುತ್ತಿದ್ದ ವೇಮುಲನನ್ನು ಹಾಸ್ಟೆಲ್​ನಿಂದ ಹೊರಹಾಕಲಾಗಿತ್ತು. ಇದೇ ಕಾರಣಕ್ಕೆ ಮನನೊಂದ ವೇಮುಲ ಸಾವಿನ ಮನೆಯ ಕದ ತಟ್ಟಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು. ಈ ಕುರಿತು ಇಂದು(ಸೋಮವಾರ) ರಾಜ್ಯರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿ.ಟಿ. ರವಿ, ರೋಹಿತ್​ ವೇಮುಲ ಸತ್ತತ್ತು ಪ್ರೇಮ ವೈಫಲ್ಯದಿಂದ. ಆದರೂ, ಕೆಲವರು ಈ ಸಾವಲ್ಲೂ ಮೋದಿ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದರು. ವಿಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದಲಿತರಿಗೆ ರಕ್ಷಣೆ ಇಲ್ಲ ಎಂದು ಅಶಾಂತಿ ಸೃಷ್ಟಿಸಿದ್ದರು. ಆದರೆ ತನಿಖೆಯಲ್ಲಿ ಸಾವಿನ ಕಾರಣ ಬಯಲಾಯ್ತು. ಈ ಪ್ರಕರಣವೇ ಸಾಕ್ಷಿ ನರೇಂದ್ರ ಮೋದಿ ಅವರನ್ನ ಕಂಡರೆ ವಿಪಕ್ಷಗಳಿಗೆ ಅದೆಷ್ಟು ದ್ವೇಷ, ಹೊಟ್ಟೆಕಿಚ್ಚು ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net