

ಕೋಲಾರ: ಮಲಗಿದ್ದಲಲ್ಲೇ ತಂದೆಯ ತಲೆಯನ್ನ ಪಾಪಿ ಮಗನೊಬ್ಬ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಶ್ರೀನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮಗನಿಂದಲೇ ಕೊಲೆಯಾದ ದುರ್ದೈವಿ. ನವೀನ್ ಪ್ರಕಾಶ್ ಕೊಲೆ ಮಾಡಿದವ. ಹಾಳಾಗಿದ್ದ ಮಗನ ಕೌಟುಂಬಿಕ ಸಮಸ್ಯೆ ಸರಿ ಪಡಿಸಲು ಮುಂದಾದ ತಂದೆ ಮತ್ತು ಮಗ ನಡುವೆ ಗುರುವಾರ ತಡರಾತ್ರಿ ಗಲಾಟೆ ನಡೆದಿತ್ತು.
ಇದೇ ಸಿಟ್ಟಿನಲ್ಲಿ ಮಲಗಿದ್ದ ತಂದೆಯ ತಲೆ ಮೇಲೆ ಅಡುಗೆ ಮನೆಯಲ್ಲಿದ್ದ ರುಬ್ಬುವ ಗುಂಡುಕಲ್ಲನ್ನು ಎತ್ತಿ ಹಾಕಿ ನವೀನ್ ಕೊಲೆ ಮಾಡಿದ್ದಾನೆ. ಸ್ಥಳೀಯರು ನವೀನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ,. ಇಡೀ ಮನೆ ರಕ್ತಸಿಕ್ತವಾಗಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.