ಅ.19, 20 ರಂದು ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆ, ಆಸಕ್ತರು ಭಾಗವಹಿಸಿ

cycling
Published on

ವಿಜಯಪುರ: ರಾಜ್ಯ ಸೈಕ್ಲಿಂಗ್ ಸಂಸ್ಥೆ ವತಿಯಿಂದ ವಿಜಯಪುರದಲ್ಲಿ ಅ.19 ಹಾಗೂ 20 ರಂದು 12ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್​ಷಿಪ್ ಆಯೋಜಿಸಲಾಗಿದೆ.

14, 16, 18 ವಯೋಮಾನದ ಬಾಲಕ-ಬಾಲಕಿಯರಿಗೆ, 23 ವರ್ಷದೊಳಗಿನ ಪುರುಷ ಹಾಗೂ ಮುಕ್ತ ಪುರುಷ-ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ರಾಜ್ಯ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸೈಕ್ಲಿಂಗ್ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ಅವರನ್ನು (ಮೊ: 9008377875) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net