ರಂಗೋಲಿ ಪುಡಿ ಸಂಗ್ರಹಿಸಲು ತೆರಳಿದ್ದ ವೇಳೆ ಮಣ್ಣು ಕುಸಿತ: ಸ್ಥಳದಲ್ಲೇ ಮಹಿಳೆಯರಿಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

rangoli powder
Published on

ಹೊಸೂರು: ಇಟ್ಟಿಗೆ ಭಟ್ಟಿಯಲ್ಲಿ ರಂಗೋಲಿ ಪುಡಿ ಸಂಗ್ರಹಿಸಲು ತೆರಳಿದ್ದ ವೇಳೆ ಮಣ್ಣು ಕುಸಿದು ಮಹಿಳೆಯರು ಮೃತಪಟ್ಟ ಘಟನೆ ಕೃಷ್ಣಗಿರಿ ಜಿಲ್ಲೆ ಥಳಿ ಸಮೀಪದ ಸಮನತ್ತಂ ಗ್ರಾಮದಲ್ಲಿ ಸಂಭವಿಸಿದೆ.

ಸಮನತ್ತಂನ ರಾಧಾ ಮತ್ತು ಲಕ್ಷ್ಮಮ ಮೃತ ದುರ್ದೈವಿಗಳು. ಉಮಾ ಮತ್ತು ವಿಮಲಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದದಾರೆ.

ಈ ನಾಲ್ವರು ಮಹಿಳೆಯರು ರಂಗೋಲಿ ಪುಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಗ್ರಾಮದ ಸಮೀಪ ಇಟ್ಟಿಗೆ ತಯಾರಿಸಲು ಮಣ್ಣು ಕೊರೆದು ಹಳ್ಳ ಮಾಡಲಾಗಿತ್ತು. ಆ ಮಣ್ಣು ಬಿಳಿ ಬಣ್ಣಕ್ಕೆ ತಿರುಗಿದ ಬಳಿಕ ಅದನ್ನು ಸಂಗ್ರಹಿಸಿ, ರಂಗೋಲಿ ಪುಡಿ ಮಾಡಿ ಮಾರಾಟ ಮಾಡುತ್ತಿದ್ದರು.

ಎಂದಿನಂತೆ ಜ.18ರಂದು ನಾಲ್ವರು ಮಹಿಳೆಯರೂ ಮಣ್ಣನ್ನು ಸಂಗ್ರಹಿಸಲು ಹೋಗಿದ್ದರು. ಆಕಸ್ಮಿಕವಾಗಿ ಮಣ್ಣು ಕುಸಿದಾಗ ಅದರಡಿ ಸಿಲುಕಿಕೊಂಡರು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ರಕ್ಷಣಾ ಕಾರ್ಯ ನಡೆಸಿದ್ದರಾದರೂ ಅಷ್ಟರಲ್ಲಿ ರಾಧಾ ಮತ್ತು ಲಕ್ಷ್ಮಮ್ಮ ಕೊನೆಯುಸಿರೆಳೆದಿದ್ದರು. ಉಮಾ ಮತ್ತು ವಿಮಲಮ್ಮ ಸ್ಥಿತಿ ಗಂಭೀರವಾಗಿದ್ದು. ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಥಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net