More

    ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ನಡೆಯುತ್ತಿತ್ತು… ಅಷ್ಟರಲ್ಲಿ ಆತ ಕಣ್ಣುಬಿಟ್ಟು ಉಸಿರಾಡಿದ!

    ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇನ್ನೇನು ಅಂತಿಮ ಕಾರ್ಯ ನಡೆಯಬೇಕು ಅನ್ನುವಷ್ಟರಲ್ಲಿ ಆತ ಕಣ್ಣುಬಿಟ್ಟು, ಉಸಿರಾಡಿದ್ದಾನೆ… ಇಂತಹ ಘಟನೆ ಮಂಗಳೂರಲ್ಲಿ ಸಂಭವಿಸಿದೆ. ಈಗ ಆ ರೋಗಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

    ಕಾಸರಗೋಡು ಜಿಲ್ಲೆಯ ಬದಿಯಡ್ಕ ವಾಂತಿಚ್ಚಾಲ್​ ನಿವಾಸಿ, ಕೂಲಿಕಾಮಿರ್ಕ ಗುರುವ(60) ಎಂಬವರನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿ ಆಕ್ಸಿಜನ್​ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್​ ತೆರವುಗೊಳಿಸಿದಲ್ಲಿ ಉಸಿರಾಟ ನಿಂತು ಪ್ರಾಣ ಹೋಗುತ್ತದೆ ಎಂದಿದ್ದರು. ಅದರಂತೆ ಆಕ್ಸಿಜನ್​ ತೆರವುಗೊಳಿಸಲಾಗಿತ್ತು. ಬಳಿಕ ಮನೆಗೆ ಫೋನ್​ ಮಾಡಿ, ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ಮಾಡುವಂತೆ ಸಂಬಂಧಿಕರು ಸೂಚನೆ ನೀಡಿದ್ದರು.

    ಇತ್ತ ಆಸ್ಪತ್ರೆಯಿಂದ ಮೃತದೇಹವನ್ನು ಆಂಬುಲೆನ್ಸ್​ನಲ್ಲಿ ಸಾಗಿಸುತ್ತಿರುವಾಗ ಉಪ್ಪಳ ತಲುಪುತ್ತಿದ್ದಂತೆ ಗುರುವ ಅವರ ದೇಹದಲ್ಲಿ ಚಲನೆ ಕಂಡುಬಂದಿದ್ದು, ಉಸಿರಾಟ ಆರಂಭವಾಗಿತ್ತು. ತಕ್ಷಣ ರೋಗಿಯನ್ನು ಬದಿಯಡ್ಕದ ಕ್ಲಿನಿಕ್​ಗೆ ಕರೆದೊಯ್ದಾಗ ಗುರುವ ಜೀವಂತವಾಗಿ ಇದ್ದಾನೆ ಎಂದು ವೈದ್ಯರು ಖಚಿತಪಡಿಸಿದರು. ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

    ಸರಿಯಾಗಿ ಓದಲಿಲ್ಲವೆಂದು ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು! ತುಮಕೂರಲ್ಲಿ ಘಟನೆ

    ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್​ ನೀವೆಲ್ಲ ನನಗೊಂದು ಸಹಾಯ​ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts