ಅದ್ದೂರಿ ಮೆರವಣಿಗೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರು! ಮನಸೆಳೆದ ದೀಪಾಲಂಕಾರ, ಡೊಳ್ಳುಕುಣಿತ

rmg school
Published on

ರಾಮನಗರ: ಒಂದರಿಂದ ಐದನೇ ತರಗತಿ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಮದರಸಾಬದೊಡ್ಡಿ ಶಾಲೆಯ ಮಕ್ಕಳನ್ನು ಡೊಳ್ಳು ಕುಣಿತ ಕಲಾವಿದರೊಂದಿಗೆ ಗ್ರಾಮದ ಆಂಜನೇಯ ದೇವಾಲಯದಿಂದ ಮೆರವಣೆಗೆ ಮೂಲಕ ಕರೆತರಲಾಯಿತು.

ನಿನ್ನೆ(ಭಾನುವಾರ) ರಾತ್ರಿಯಿಂದಲೇ ಶಾಲೆ ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ತಳಿರುತೋರಣ, ಹೂವಿನಿಂದ ಶಾಲೆಯಲ್ಲು ಅಲಂಕರಿಸಲಾಗಿದ್ದು, ಶಾಲಾ ಪ್ರವೇಶ ದ್ವಾರ ಮತ್ತು ಆವರಣದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಸೋಮವಾರ ಬೆಳ್ಳಂಬೆಳಗ್ಗೆಯೇ ಶಾಲೆಯ ಬಾಗಿಲಲ್ಲೇ ನಿಂತಿದ್ದ ಶಿಕ್ಷಕರು ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳು ಬರುತ್ತಿದ್ದಂತೆ ಅವರನ್ನು ಗ್ರಾಮದ ಆಂಜನೇಯ ದೇಗುಲದ ಬಳಿ ಪೂಜೆ ಮಾಡಿ ಮೆರವಣಿಗೆ ಮೂಲಕ ಕರೆತಂದರು. ಡೊಳ್ಳುಕುಣಿತ ಕಲಾವಿದರು ಸಾಥ್​ ನೀಡಿದರು.

ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರು ಸಾಥ್​ ಕೊಟ್ಟರು. ಯಾವುದೋ ಉತ್ಸವ ಇದ್ದಂತೆ ನೋಡುಗರಿಗೆ ಭಾಸವಾಗುತ್ತಿತ್ತು, ಮಕ್ಕಳಂತೂ ಖುಷಿಯಾಗಿ ಶಾಲೆಯತ್ತ ಹೆಜ್ಜೆ ಇಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net