ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ರೈತ ಮಹಿಳೆಯರು ಬಲಿ

Thunder
Published on

ಯಲಬುರ್ಗಾ: ಕೊಪ್ಪಳ ಜಿಲ್ಲಾದ್ಯಂತ ಭಾನುವಾರ ಗುಡುಗು- ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲಿಗೆ ರೈತ ಮಹಿಳೆಯರಿಬ್ಬರು ಬಲಿಯಾಗಿದ್ದಾರೆ. ಮೂರು ಗಾಯಗೊಂಡಿದ್ದಾರೆ.

ದೇವಮ್ಮ ಯಮನಪ್ಪ ಮುದೇನೂರು (55) ಮತ್ತು ರೇಷ್ಮಾ ಕೊಟ್ರೇಶ ಛಲವಾದಿ (27) ಮೃತರು. ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಇವರಿಬ್ಬರೂ ಎಂದಿನಂತೆ ಭಾನುವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಕಳೆ ಕೀಳುವಾಗ ಮಳೆ ಬಂದ ಕಾರಣ ಆಶ್ರಯಕ್ಕಾಗಿ ಮರದ ಕೆಳಗೆ ನಿಂತಿದ್ದರು, ಈ ವೇಳೆ ಸಿಡಿಲು ಬಡಿದಿದೆ.

ಘಟನೆಯಲ್ಲಿ ಯಮನವ್ವ ಮುದೇನೂರು, ಅನ್ನಕ್ಕ ಛಲವಾದಿ, ರತ್ನವ್ವ ಸುಣಗಾರ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net