ವಿಜಯನಗರದಲ್ಲಿ ಸಿಡಿಲು ಬಡಿದು ಬಾಲಕ ಸೇರಿ ಮೂವರ ಸಾವು

Thunderbolt
Published on

ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಬಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಉಪ್ಪಾರ ಹನುಮಂತಪ್ಪ(35), ಮಲ್ಲಿಕಾರ್ಜುನ(34) ಮತ್ತು ಮೈಲಾರಿ(11) ಮೃತ ದುರ್ದೈವಿಗಳು. ಇವರ ಜತೆಗೆ ಎರಡು ಮೇಕೆಗಳೂ ಸತ್ತಿವೆ.

ವಿಜಯನಗರದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಗುಡುಗು, ಸಿಡಿಲಿನ ಅಬ್ಬರ ಜೋರಾಗಿದೆ. ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆಚ್ಚಿದ್ದ ಜನಗೆ ವರಲಳ್ಳಿಯಲ್ಲಿ ಮೂವರ ಸಾವಿನ ಸುದ್ದಿ ಮತ್ತಷ್ಟು ಭೀತಿ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net