ಪ್ರೇಯಸಿ ಹೆಸರಲ್ಲಿ ಕೊಡಗು ಎಸ್​ಪಿಗೆ ಪತ್ರ ಬರೆದು ಮಧ್ಯಪ್ರದೇಶದಲ್ಲಿ ಪೊನ್ನಂಪೇಟೆ ಮೂಲದ ಯುವಕ ಆತ್ಮಹತ್ಯೆ!

love case
Published on

ಕೊಡಗು: ಮಧ್ಯಪ್ರದೇಶದಲ್ಲಿ ಕೊಡಗು ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ತನ್ನ ಮನದಾಳದ ನೋವನ್ನ ಅಕ್ಷರಕ್ಕಿಳಿಸಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡೆತ್​ನೋಟ್ ಪತ್ರ ಬರೆದಿದ್ದಾನೆ.

ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದ ದರ್ಶನ್(28) ಆತ್ಮಹತ್ಯೆ ಮಾಡಿಕೊಂಡವ. ಈತ ಮಧ್ಯಪ್ರದೇಶದ ಸಿಂಗ್ರೌಳಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇ ಡೆತ್​ನೋಟ್​ ಬರೆದಿಟ್ಟು ಸಾವಿನ ಮನೆಯ ಕದ ತಟ್ಟಿದ್ದಾನೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಅಷ್ಟಕ್ಕೂ ದರ್ಶನ್​ ಸಾವಿಗೆ ಕಾರಣ ಏನು ಗೊತ್ತಾ? ಸ್ವಗ್ರಾಮದ ಯುವತಿ ಜತೆಗಿನ 8 ವರ್ಷದ ಪ್ರೀತಿ...

ಸ್ವಗ್ರಾಮದ ಯುವತಿ ಮತ್ತು ದರ್ಶನ್​ ಇಬ್ಬರೂ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇವರಿಬ್ಬರ ಮದುವೆಗೂ ಮನೆಯಲ್ಲಿ ಒಪ್ಪಿಗೆ ಸಿಕ್ಕಿತ್ತಂತೆ. ಯುವತಿಯೂ ಮದುವೆಗೆ ಓಕೆ ಅಂದಿದ್ದಳಂತೆ. 4 ತಿಂಗಳ ಹಿಂದೆ ಬೆಂಗಳೂರಿನ ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಮೇಲೆ ಯುವತಿಗೆ ಪ್ರೀತಿಯಾಗಿದ್ದು, ಆತನನ್ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಇದೇ ಕಾರಣಕ್ಕೆ ಯುವತಿ ದರ್ಶನ್ ಜತೆ ವಿವಾಹ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ದರ್ಶನ್, ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಪ್ರೇಯಸಿ ಶಿಲ್ಪಾ ಮತ್ತು ಆಕೆಯ ಮನೆಯವರು ಕಾರಣ‌ ಎಂದು ಉಲ್ಲೇಖಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net