VIDEO| ಅಪ್ಪು ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ಬೀಳ್ಕೊಟ್ಟ ಗ್ರಾಮಸ್ಥ! ಬಿಕ್ಕಿಬಿಕ್ಕಿ ಅಳುತ್ತಿದ್ದ ಮಕ್ಕಳು-ಶಿಕ್ಷಕರು

1199065
Published on

ವಿಜಯನಗರ: ನಟ ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ಹಾಡೊಂದನ್ನು ಹೇಳುತ್ತಾ ಗ್ರಾಮಸ್ಥರೊಬ್ಬರು ಶಾಲೆಯ ಮೂವರು ಶಿಕ್ಷಕರಿಗೆ ವಿಶೇಷವಾಗಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಮಕ್ಕಳು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಅತ್ತ ಶಿಕ್ಷಕರೂ ಕಣ್ಣೀರು ಸುರಿಸಿದ್ದಾರೆ.

ಇಂತಹ ಮನಮಿಡಿಯುವ ಘಟನೆ ಹೂವಿನ ಹಡಗಲಿ ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಲಕ್ಷ್ಮೀ, ಬಸೀರ್ ಮತ್ತು ಉಷಾ ಸೇರಿ ಮೂವರು ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. 9 ವರ್ಷಗಳಿಂದ ನಾಗತಿಬಸಾಪುರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಇದೀಗ ಬೇರೆಡೆಗೆ ಹೋಗುತ್ತಿರುವ ಸುದ್ದಿ ಕೇಳುತ್ತಿದ್ದಂತೆ ಮಕ್ಕಳು, 'ಪ್ಲೀಸ್​ ಮೇಡಂ, ಪ್ಲೀಸ್​ ಸರ್​ ಹೋಗ್ಬೇಡಿ' ಎಂದು ಮನವಿ ಗೋಗರೆದಿದ್ದಾರೆ. ಆದರೆ, ಶಿಕ್ಷಕರ ಬದುಕಿನ ಪಯಣ ಸಾಗಲೇಬೇಕಲ್ಲವೇ...

ವರ್ಗಾವಣೆಗೊಂಡ ಮೂವರು ಶಿಕ್ಷಕರಿಗೂ ಬೀಳ್ಕೊಡುಗೆ ಕೊಡುವ ವೇಳೆ ಗ್ರಾಮಸ್ಥ ನಾಗರಾಜ್ ಸಜ್ಜಿ ಎಂಬುವರು ಅಪ್ಪು ಅವರ 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ...' ಎಂಬ ಹಾಡನ್ನು ಹೇಳುತ್ತಲೇ ಭಾವುಕರಾದರು. ಹಾಡು ಕೇಳ್ತಿದ್ದಂತೆ ಶಿಕ್ಷಕರ ಕಣ್ಣಂಚಲ್ಲಿ ನೀರು ತುಂಬಿ ಬಂತು. ವಿದ್ಯಾರ್ಥಿಗಳು ನಿಂತಲ್ಲೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net