ಇಂದು 11ನೇ ದಿನದ ಪುಣ್ಯತಿಥಿ: ನೋವು ತುಂಬಿದ ಮನದಲ್ಲೇ ಪರೀಕ್ಷೆ ಬರೆಯಲು ಹೊರಟ ಪುನೀತ್​ರ ಕಿರಿ ಮಗಳು

puneetha rajkumar daughter
Published on

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್​ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 11 ದಿನ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಅವರ ಕುಟುಂಬಸ್ಥರು 11ನೇ ದಿನ ಕಾರ್ಯ ನೆರವೇರಿಸುತ್ತಿದ್ದಾರೆ. ಅಪ್ಪನನ್ನು ಕಳೆದುಕೊಂಡ ನೋವಿನಲ್ಲೇ ಅಪ್ಪು ಅವರ 2ನೇ ಪುತ್ರಿ ವಂದಿತಾ ಪರೀಕ್ಷೆ ಬರೆಯುವ ಸ್ಥಿತಿ ಎದುರಾಗಿದೆ.

ವಂದಿತಾ ಬೆಂಗಳೂರಿನ ಪ್ಯಾಲೇಸ್​ ರಸ್ತೆಯ ಸೋಫಿಯಾ ಶಾಲೆಯಲ್ಲಿ ICSE 10ನೇ ತರಗತಿ ಓದುತ್ತಿದ್ದಾಳೆ. ಮುಂದಿನ ವಾರ ಸೆಮಿಸ್ಟರ್ ಎಕ್ಸಾಂ ನಡೆಯಲಿದ್ದು, ಈ ಹಿನ್ನೆಲೆ ಇಂದಿನಿಂದ ಪೂರ್ವ ತಯಾರಿ ಪರೀಕ್ಷೆ ಆರಂಭವಾಗಿದೆ.

ಮಕ್ಕಳ ಶಿಕ್ಷಣದ ಬಗ್ಗೆ ಅಪ್ಪು ಅವರಿಗೆ ಹೆಚ್ಚು ಕಾಳಜಿ ಇತ್ತು. ಮಕ್ಕಳ ಕಲಿಕೆಗೆ ಕಿಂಚಿತ್ತೂ ತೊಂದರೆ ಆಗದಂತೆ ಅಪ್ಪು ಎಚ್ಚರ ವಹಿಸುತ್ತಿದ್ದರು. ಹಾಗಾಗಿ ಅಪ್ಪನ ಅಗಲಿಕೆ ನೋವಿನಲ್ಲೂ ಮಗಳು ವಂದಿತಾ ಎಕ್ಸಾಂ ಹಾಜರಾಗಲು ಮನಸು ಮಾಡಿದ್ದಾಳೆ.

ಅ.29ರಂದು ಅಪ್ಪು ನಿಧನರಾದ ವೇಳೆ ಅವರ ಹಿರಿಯ ಪುತ್ರಿ ಧೃತಿ ನ್ಯೂಯಾರ್ಕ್​ನಲ್ಲಿದ್ದರು. ಅಪ್ಪ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅಲ್ಲಿಂದ ಭಾರತಕ್ಕೆ ಹೊರಟ ಧೃತಿ, ಅ.30ರ ಸಂಜೆ ನೋವಿನ ಭಾರ ಹೊತ್ತುಕೊಂಡೇ ಅಪ್ಪನ ಪಾರ್ಥೀವ ಶರೀರದತ್ತ ಹೆಜ್ಜೆ ಹಾಕಿದ ದೃಶ್ಯ ಇಂದಿಗೂ ಮನಕಲಕುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net