ಗೌರವಯುತವಾಗಿ ಬಂದು ಶರಣಾಗಿ, ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕ್ತೀವಿ: ದಿವ್ಯಾ ಹಾಗರಗಿಗೆ ಗೃಹ ಸಚಿವ ವಾರ್ನಿಂಗ್​

Divya Hagaragi 1
Published on

ಬೆಂಗಳೂರು: ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಕಲಬುರಗಿಯ ದಿವ್ಯಾ ಹಾಗರಗಿಗೆ ಗೃಹ ಸಚಿವರ ವಾರ್ನಿಂಗ್​ ಕೊಟ್ಟಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು, ಇಲ್ಲವಾದರೆ ಶೀಘ್ರವೇ ನಿಮ್ಮ ಆಸ್ತಿ ಮುಟ್ಟುಗೋಲು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ದಿವ್ಯಾ ಹಾಗರಗಿ ಅವರೇನು ಸ್ಟ್ರಾಂಗ್ ಇಲ್ಲ. ಅವ್ರು ಊರು ಬಿಟ್ಟಿದ್ದಾರೆ. ಈಗಾಗಲೇ ಅವರ ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಶೀಘ್ರವೇ ಅವರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು. ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್‌ ಅನ್ನು ಹೊರಗೆ ತರ್ತೇವೆ. ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ ಎಂದರು.

ಪ್ರಿಯಾಂಕಾ ಖರ್ಗೆ ಅನೇಕ ಆರೋಪ ಮಾಡಿದ್ದಾರೆ. ಅವರಿಗೆ ಸಿಐಡಿ ನೋಟಿಸ್ ಕೊಟ್ಟಿದೆ. ಅವರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಅವರು ದಾಖಲೆ ಕೊಡಬಹುದು ಅಲ್ವಾ? ಅವರ ತಂದೆ ಎಷ್ಟು ದೊಡ್ಡವರು? ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ವಾ? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರುವ ದಾಖಲೆಯನ್ನು ಕೊಡಲಿ ಎಂದು ಆಗ್ರಹಿಸಿದ ಗೃಹ ಸಚಿವರು, ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net