ಎಸ್​ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್​ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ

spm devegowda
Published on

ತುಮಕೂರು: "ಕಳೆದ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಒತ್ತಾಯ ಮಾಡಿ ಕಾಂಗ್ರೆಸ್​ನವರೇ ನಿಲ್ಲಿಸಿದ್ರು, ಎಸ್​.ಪಿ.ಮುದ್ದಹನುಮೇಗೌಡರನ್ನು ಅನ್ಯಾಯವಾಗಿ ರಾಜಕೀಯವಾಗಿ ಕೊಂದ್ರು' ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಜನತಾ ಜಲಧಾರೆ ರಥಯಾತ್ರೆ ತುಮಕೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಗಾಜಿನಮನೆಯಲ್ಲಿ ಕಾರ್ಯಕತರ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಇತ್ತೀಚೆಗೆ ಮಧುಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕೂಡ ನನ್ನ ಮೇಲಿನ ದ್ವೇಷದಿಂದ ಜಿಲ್ಲೆಯ ಒಕ್ಕಲಿಗ ಸಮುದಾಯದ ಮುಖಂಡರೇ ದೇವೇಗೌಡರನ್ನು ಬಲವಂತವಾಗಿ ಕರೆತಂದು ಸ್ಪರ್ಧಿಸುವಂತೆ ಮಾಡಿದ್ದರು ಎಂದು ಆರೋಪಿಸಿದ್ದರು. ಆದರೆ ನನ್ನನ್ನು ಒತ್ತಾಯ ಮಾಡಿ ತುಮಕೂರಲ್ಲಿ ಚುನಾವಣೆಗೆ ನಿಲ್ಲಿಸಿದ್ದು ಕಾಂಗ್ರೆಸ್​ನವರು. ನಾನು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದೆ, ಸಂಸದರಾಗಿದ್ದ ಮುದ್ದಹನುಮೇಗೌಡ ಕೂಡ ಬಂದು ಮನವಿ ಮಾಡಿದ್ದರು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಜೆಪಿ, ಕಾಂಗ್ರೆಸ್​ನವರು ಆಡಳಿತ ನಡೆಸದಂತೆ ತೊಂದರೆ ಕೊಟ್ಟರು. ತುಮಕೂರಿಗೆ ದೇವೇಗೌಡರನ್ನು ಕರೆತಂದು ನಿಲ್ಲಿಸಿ ಸೋಲಿಸದವರು ಕಾಂಗ್ರೆಸ್​ನವರೇ. ಕುಮಾರಸ್ವಾಮಿ ಸರ್ಕಾರವನ್ನು ಕಾಂಗ್ರೆಸ್​ನವರು ಬೀಳಿಸಿಲ್ಲ ಎಂದು ಡಾ.ಜಿ.ಪರಮೇಶ್ವರ ಅವರು ಸಿದ್ಧಗಂಗಾ ಮಠದ ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಜಿಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net