ಡ್ಯಾಂನಲ್ಲಿದೆ PSI ಅಕ್ರಮದ ಸೀಕ್ರೇಟ್​! CID ಮುಂದೆ ಪ್ರಮುಖ ಆರೋಪಿ ಬಾಯ್ಬಿಟ್ಟ ರಹಸ್ಯ ಇದು

psi exam scam
Published on

ಕಲಬುರಗಿ: ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಪ್ರಕರಣ ಸಂಬಂಧ ಮಹ್ವತದ ಸಾಕ್ಷಿಯೊಂದು ಕಲಬುರಗಿಯ ಆಳಂದ ಅಮರ್ಜಾ ಡ್ಯಾಂನಲ್ಲಿದೆ! ಏನಿದು ಡ್ಯಾಂ ಸೀಕ್ರೆಟ್ ಅಂದ್ಕೊಂಡ್ರಾ?

ಸಿಐಡಿ ಕೈಗೆ ತಗಲ್ಲಾಕ್ಕೊಂಡ್ರೆ ಮುಗೀತು ಕಥೆ ಎಂದು ಭಯಗೊಂಡ ಅಕ್ರಮದ ಪ್ರಮುಖ ಆರೋಪಿ ಮಂಜುನಾಥ ಮೇಲ್ಕುಂದಿ, ತನ್ನ ಮೊಬೈಲ್ ಅನ್ನೇ ಡ್ಯಾಂಗೆ ಎಸೆದಿದ್ದಾನೆ. ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗುವ ಮುನ್ನವೇ ಮೊಬೈಲ್ ಅನ್ನು ಡ್ಯಾಂಗೆ ಎಸೆದು ಬಂದಿದ್ದ. ಹಲವು ಅಭ್ಯರ್ಥಿಗಳ ವ್ಯವಹಾರ ಕುದುರಿಸಿದ್ದ ಮಂಜುನಾಥನ ಜೊತೆ ಪ್ರಮುಖ ಘಟಾನುಘಟಿ ರಾಜಕಾರಣಿಗಳೂ ಲಿಂಕ್​ನಲ್ಲಿದ್ದರು. ಬಂಧನ ಆಗೋದು ಕನ್ಫರ್ಮ್ ಆಗ್ತಿದಂತೆ ಭಯಗೊಂಡ ಆತ, ಅರೆಸ್ಟ್​ ಆದಾಗ ಪೊಲೀಸರಿಗೆ ಮೊಬೈಲ್ ಸಿಕ್ರೆ ತನ್ನ ಬಂಡವಾಳ ಬಯಲಿಗೆ ಬರುತ್ತೆ ಅಂತ ಡ್ಯಾಂಗೆ ಎಸೆದಿದ್ದಾನೆ.

ವಿಚಾರಣೆ ವೇಳೆ ಮೊಬೈಲ್ ಎಲ್ಲಿದೆ ಅಂತ ಸಿಐಡಿ ಅಧಿಕಾರಿಗಳು ಲೆಫ್ಟ್ ರೈಟ್ ತೆಗೆದುಕೊಳ್ಳುತ್ತಿದ್ದಂತೆ ಆರೋಪಿ ಬಾಯ್ಬಿಟ್ಟಿದ್ದಾನೆ. ಮೊಬೈಲ್​ಗಾಗಿ ಸಿಐಡಿ ಅಧಿಕಾರಿಗಳು ಸೋಮವಾರ ನುರಿತ ಈಜುಗಾರರನ್ನು ಕರೆದೊಯ್ದು ದಿನವಿಡೀ ಹುಡುಕಾಡಿದ್ರೂ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net