ಮಗನ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ... ಮನನೊಂದು ಸಾವಿನ ಮನೆಯ ಕದ ತಟ್ಟಿದ ತಾಯಿ

Cake
Published on

ಬೆಂಗಳೂರು: ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಗ್ಗಲಿಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕನಕಪುರ ರಸ್ತೆ ಗಿರಿಗೌಡನದೊಡ್ಡಿ ಗ್ರಾಮದ ತೇಜಸ್ವಿನಿ(35) ಮೃತ ದುರ್ದೈವಿ. ಶ್ರೀಕಂಠ ಮತ್ತು ತೇಜಸ್ವಿನಿ ದಂಪತಿಗೆ ಇಬ್ಬರು ಮಕ್ಕಳು. ಕೋಳಿ ಸಾಕಣೆ ಕೇಂದ್ರ ನಡೆಸುತ್ತಿದ್ದ ಶ್ರೀಕಂಠ, ಇತ್ತೀಚೆಗೆ ನಷ್ಟ ಅನುಭವಿಸಿ ವ್ಯವಸಾಯ ಮಾಡುತ್ತಿದ್ದರು. ಮೇ 6ರಂದು ಮಗನ 2ನೇ ವರ್ಷದ ಹುಟ್ಟುಹಬ್ಬವಿತ್ತು. ಹಣಕಾಸಿನ ತೊಂದರೆಯಿಂದ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ.

ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಆಗದೆ ತಂದೆ ಶ್ರೀಕಂಠ, ಕೆಲಸ ನಿಮಿತ್ತ ಮೈಸೂರಿಗೆ ಹೋಗಿ ಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದರು. ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಎಂಥ ಸ್ಥಿತಿ ಬಂತು ಎಂದು ನೊಂದುಕೊಂಡ ತೇಜಸ್ವಿನಿ ನೇಣಿಗೆ ಶರಣಾಗಿದ್ದಾರೆ. ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net