ಕೊಪ್ಪಳ ಆಸ್ತಿ ವಿವಾದ: ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

New Project(10)
Published on

ಕೊಪ್ಪಳ: ಆಸ್ತಿ ವಿವಾದಕ್ಕೆ ಸಿಟ್ಟಿಗೆದ್ದ ಅಣ್ಣನು ತಮ್ಮನನ್ನು ಗುಂಡಿಟ್ಟು ಕೊಂದ ಘಟನೆ ಕವಲೂರು ಗ್ರಾಮದಲ್ಲಿ ಸಂಭವಿಸಿದೆ.

ವಿನಾಯಕ ದೇಸಾಯಿ(32) ಮೃತ ದುರ್ದೈವಿ. ಇವರ ಅಣ್ಣ ರಾಘವೇಂದ್ರ ದೇಸಾಯಿ ಕೊಲೆ ಮಾಡಿದಾತ. ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ಬಹುದಿನದಿಂದ ಜಗಳವಿತ್ತು. ವಿವಾದ ಇರುವಾಗಲೇ ರಾಘವೇಂದ್ರ ದೇಸಾಯಿ ಹೊಲದಲ್ಲಿ ಬಿತ್ತನೆ ಮಾಡಿದ್ದಾನೆ. ಅದನ್ನು ತೆರವು ಮಾಡಲು ವಿನಾಯಕ‌ ದೇಸಾಯಿ ತೆರಳಿದಾಗ ಪರಸ್ಪರ ಜಗಳವಾಗಿದೆ.

ಇದರಿಂದ ಉದ್ರಿಕ್ತಗೊಂಡ ರಾಘವೇಂದ್ರ ದೇಸಾಯಿ ತನ್ನ ಪರವಾನಗಿ ಹೊಂದಿದ ಬಂದೂಕಿನಿಂದ ವಿನಾಯಕನಿಗೆ ಗುಂಡು ಹೊಡೆದು ಸಾಯಿಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಳವಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net