ರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ... ಮಗು ಬದುಕಲಿಲ್ಲ!

corona new
Published on

ರಾಯಚೂರು: ಮೂರು ತಿಂಗಳ ಗರ್ಭಿಣಿಗೂ ಕರೊನಾ ಸೋಂಕು ತಗುಲಿದ್ದು, ಐಸೋಲೇಷನ್ ವಾರ್ಡ್​ನಲ್ಲಿದ್ದ ಇವರಿಗೆ ಭಾನುವಾರ ರಕ್ತಸ್ರಾವ ಕಾಣಿಸಿಕೊಂಡಿತ್ತು. ಆದರಿಂದು (ಮಂಗಳವಾರ) ಗರ್ಭಪಾತವಾಗಿದೆ.

ಇಲ್ಲಿನ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿದ್ದ ಗರ್ಭಿಣಿಗೆ ನಿನ್ನೆ(ಭಾನುವಾರ) ರಕ್ತಸ್ರಾವ ಕಾಣಿಸಿಕೊಂಡು ನೋವಿನಿಂದ ನರಳುತ್ತಿದ್ದರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಐಸೋಲೇಷನ್ ವಾರ್ಡ್​ನಲ್ಲಿದ್ದ ರೋಗಿಗಳು ಮಧ್ಯಾಹ್ನ ಊಟ ಬಿಟ್ಟು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ರೋಗಿಗಳ ಆಕ್ರೋಶಕ್ಕೆ ಮಣಿದು ಗರ್ಭಿಣಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ, ತೀವ್ರ ರಕ್ತಸ್ರಾವದಿಂದ ಗರ್ಭಪಾತವಾಗಿದೆ. ಸೋಂಕಿತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net