More

    ಕರೊನಾ ರೋಗಿಗಳಿಗಿನ್ನು ಮನೆಯೇ ಆಸ್ಪತ್ರೆ; ಕಾಸಿಗೆ ತಕ್ಕ ಟ್ರೀಟ್​ಮೆಂಟ್​ ಪ್ಯಾಕೇಜ್​

    ನವದೆಹಲಿ: ಕರೊನಾ ಬರೋದಾದ್ರೆ, ಈಗ್ಲೆ ಅಂಟಿಕೊಳ್ಳಲ್ಲಪ್ಪಾ…, ಸರ್ಕಾರ ಫ್ರೀಯಾಗಿ ಟ್ರೀಟ್​ಮೆಂಟ್​ ಕೊಡುತ್ತೆ ಅನ್ನೋದು ಜೋಕ್​ ಆಗಿದ್ದರೂ, ಆರ್ಥಿಕ ಹೊರೆಯ ಭಯವೂ ಆಗಿತ್ತು. ಮಧ್ಯಮ ವರ್ಗದ ಜನರು ಹೀಗೊಂದು ಜೋಕ್​ ಮಾಡುತ್ತಿದ್ದರೆ, ಹೌದಪ್ಪಾ ಎಂದು ತಲೆಯಾಡಿಸೋರು ಇಲ್ಲದಿಲ್ಲ. ಅಂಥ ಮಧ್ಯಮ ವರ್ಗದವರ ಭಯ ಈಗ ವಾಸ್ತವವಾಗಿ ಪರಿಣಮಿಸಿದೆ.

    ಸರ್ಕಾರ ಈಗ ಖಾಸಗಿಯವರಿಗೂ ಕರೊನಾ ಟ್ರೀಟ್​ಮೆಂಟ್​ಗೆ ಅವಕಾಶ ನೀಡಿದೆ. ಜತೆಗೆ, ಶುಲ್ಕ ನಿಯಂತ್ರಣದ ಬಗ್ಗೆ ಚರ್ಚೆಗಳಾಗುತ್ತಿದ್ದರೂ, ಅಂತಿಮವಾಗಿ ಖಾಸಗಿ ಆಸ್ಪತ್ರೆಗಳು ಇದಕ್ಕೆ ಮಣಿಯಲ್ಲ ಎಂಬುದು ಕೂಡ ಅಷ್ಟೇ ಸತ್ಯ.

    ಕರೊನಾದಿಂದ ಲಘು ಸೋಂಕಿಗೆ ಒಳಗಾದವರಿಗೆ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಲಘು ಸೋಂಕಿತರನ್ನು 24 ಗಂಟೆಯೊಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ ಮನೆಗೆ ಕಳುಹಿಸಲಾಗುತ್ತಿದೆ.
    ಈಗ ಇಂಥವರಿಗಾಗಿಯೇ ಖಾಸಗಿ ಆಸ್ಪತ್ರೆಗಳು ‘ರಿಮೋಟ್​ ಮಾನಿಟರಿಂಗ್​’ ‘ಕೇರ್​ ಎಟ್​ ಹೋಮ್​’ ಎಂಬ ವ್ಯವಸ್ಥೆಯಡಿ ವಿಶೇಷ ಟ್ರಿಟ್​ಮೆಂಟ್​ ಪ್ಯಾಕೇಜ್​ ಆರಂಭಿಸಿವೆ.

    ಇದನ್ನೂ ಓದಿ; ಕೊಳಚೆ ನೀರಿಗೂ ವಕ್ಕರಿಸಿದೆ ಕರೊನಾ; ಚೆನ್ನೈ ಬಳಿಕ ಅಹಮದಾಬಾದ್​ ಸರದಿ 

    ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಬೆಡ್​ಗಳು ಸಿಗುತ್ತಿಲ್ಲ. ಸರ್ಕಾರ ಚಿಕಿತ್ಸೆಗೆಂದು ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಬೆಡ್​ ಇಲ್ಲ ಎಂದು ನಿರಾಕರಿಸುತ್ತಿವೆ. ಈ ಕಾರಣದಿಂದಾಗಿ ಮನೆಯನ್ನೇ ಆಸ್ಪತ್ರೆಯಾಗಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.

    ದೆಹಲಿಯ ಮ್ಯಾಕ್ಸ್​ ಹೆಲ್ತ್​ ಕೇರ್​, ಮೇದಾಂತ, ಫೊರ್ಟಿಸ್​ ಮೊದಲಾದ ಆಸ್ಪತ್ರೆಗಳು ಈ ಯೋಜನೆ ಆರಂಭಿಸಿವೆ. ಇದರಲ್ಲಿ ಥರ್ಮಾಮೀಟರ್, ಆಮ್ಲಜನಕ ಪ್ರಮಾಣ ಅಳೆಯುವ ಮೀಟರ್​ ಒಳಗೊಂಡ ಆರೋಗ್ಯ ಕಿಟ್​ ನೀಡಲಾಗುತ್ತದೆ. ಕೆಲ ಆಸ್ಪತ್ರೆಗಳು ಮಾಸ್ಕ್​, ಸ್ಯಾನಿಟೈಸರ್​, ರಕ್ತದೊತ್ತಡ ಅಳೆಯುವ ಯಂತ್ರ, ಪಿಪಿಇ ಕಿಟ್​, ತುತು ಸಂದರ್ಭದಲ್ಲಿ ಎಚ್ಚರಿಸುವ ವ್ಯವಸ್ಥೆ ಹೊಂದಿರುವ ಮಾನಟರಿಂಗ್​ ಸಾಧನವನ್ನು ಒದಗಿಸಲಿವೆ.

    ಇದನ್ನೂ ಓದಿ; ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

    ನುರಿತ ನರ್ಸ್​ ದಿನಕ್ಕೆರಡು ಬಾರಿ ದೇಹದ ಪ್ರಮುಖ ಅಂಗಗಳ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ. ಟೆಲಿ- ಮೆಡಿಸಿನ್​ ಮುಖಾಂತರ ಮೂರು ದಿನಕ್ಕೊಮ್ಮೆ ವೈದ್ಯರು ರೋಗಿಯ ಆರೋಗ್ಯ ತಪಾಸಣೆ ಹಾಗೂ ಸಂವಾದ ನಡೆಸಲಿದ್ದಾರೆ. ಇದರೊಂದಿಗೆ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಇಷ್ಟೆಲ್ಲ ಇದ್ದ ಮೇಲೆ, ಇದಕ್ಕೆ ಶುಲ್ಕವೂ ಕೂಡ ಜೇಬಿಗೆ ತಕ್ಕಂತೆ ಇರಲಿದೆ. ಒಂದು ಸಮಾಧಾನದ ವಿಷಯವೆಂದರೆ, ಆಸ್ಪತ್ರೆಯ ವಾರ್ಡ್​ ಅಥವಾ ಬೆಡ್​ ಚಾರ್ಜ್​ ನೀಡಬೇಕಿಲ್ಲ.

    ಇನ್ನು ಮನೆಯಲ್ಲೇ ಚಿಕಿತ್ಸೆ ಪಡೆಯಲು ಕೆಲ ಅಗತ್ಯಗಳನ್ನು ಪೂರೈಸಬೇಕಿದೆ. ರೋಗಿಗಳು ಲಘು ಸೋಕಿಗೆ ಒಳಗಾಗಿರಬೇಕು. ಸೂಕ್ತ ಕೊಠಡಿ ಹೊಂದಿರಬೇಕು. ರೋಗಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಗಬೇಕು. ಜತೆಗೆ, ರೋಗಿಗೆ ಚಿಕಿತ್ಸೆ ನೀಡುವವರು ಹಾಗೂ ಸಂಪರ್ಕದಲ್ಲಿರುವವರು ಮುಂಜಾಗೃತಾ ಕ್ರಮವಾಗಿ ವೈದ್ಯರ ಶಿಫಾರಸ್ಸಿನಂತೆ ಹೈಡ್ರೋಕ್ಸಿಕ್ಲೊರೋಕ್ವಿನ್​ ಮಾತ್ರೆ ಸೇವಿಸಬೇಕಾಗುತ್ತದೆ.

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts