More

    ಕೋವಾಕ್ಸಿನ್ ಹೆಚ್ಚು ದುಬಾರಿ ! ಖಾಸಗಿ ಆಸ್ಪತ್ರೆಗಳಿಗೆ ಒಂದು ಡೋಸ್​​ಗೆ 1,200 ರೂ. ದರ ನಿಗದಿ

    ನವದೆಹಲಿ : ಭಾರತ್ ಬಯೋಟೆಕ್​​ ನ ಕೋವಾಕ್ಸಿನ್​ ಕರೊನಾ ಲಸಿಕೆಗೆ ತೆರೆದ ಮಾರುಕಟ್ಟೆಯ ಬೆಲೆಯನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 600 ರೂ.ಗಳಂತೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಂತೆ ಮಾರಾಟ ಮಾಡುವುದಾಗಿ ಕಂಪೆನಿ ಹೇಳಿಕೆ ನೀಡಿದೆ. ಉತ್ಪಾದನೆಯ ಅರ್ಧದಷ್ಟು ಲಸಿಕೆಗಳನ್ನು ಈ ಬೆಲೆಗಳಲ್ಲಿ ಭಾರತ್ ಬಯೋಟೆಕ್ ಮಾರಲು ಬಯಸಿದ್ದು, ಉಳಿದ ಅರ್ಧದಷ್ಟನ್ನು ಕೇಂದ್ರ ಸರ್ಕಾರಕ್ಕೆ ಒಂದು ಡೋಸ್​ಗೆ 150 ರೂ.ಗಳಂತೆ ಮಾರಾಟ ಮಾಡಲಿದೆ.

    ಇದುವರೆಗೆ ಭಾರತದಲ್ಲಿ ನೀಡಲಾಗಿರುವ 13.81 ಕೋಟಿ ಲಸಿಕೆಯ ಡೋಸ್​ಗಳಲ್ಲಿ ಶೇ.9.24 ರಷ್ಟು ಮಾತ್ರ ಕೋವಾಕ್ಸಿನ್ ಲಸಿಕೆ ನೀಡಲಾಗಿದೆ. ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗೆಗಿನ ಅಂತಿಮ ಫಲಿತಾಂಶಗಳು ಇನ್ನೂ ಜೂನ್​ನಲ್ಲಿ ಲಭ್ಯವಾಗಲಿದೆ. ಇದೀಗ, ತಾನೇ ನಿಗದಿ ಮಾಡಿದ ಬೆಲೆಯಲ್ಲಿ ಮೇ 1 ರಿಂದ ಲಸಿಕೆ ಮಾರಾಟ ಮಾಡುವ ಅವಕಾಶ ಸಿಕ್ಕಿರುವಾಗ, ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್​ಗಿಂತ ದುಬಾರಿ ಬೆಲೆಯನ್ನು ಭಾರತ್ ಬಯೋಟೆಕ್ ನಿಗದಿ ಮಾಡಿದೆ.

    ಇದನ್ನೂ ಓದಿ: ಕೋವಿಶೀಲ್ಡ್​ : ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 400 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ದುಬಾರಿ !

    ಈ ದರದಲ್ಲಿ ಲಸಿಕೆ ಪಡೆಯಲು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನೀಡುವ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಹಣ ತೆರಬೇಕಾಗುವುದು. ಇನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರಿ ಬೆಲೆಗಿಂತ ಎಂಟು ಪಟ್ಟು ಹೆಚ್ಚು ದರ ನೀಡಬೇಕಾಗುವುದು. ಅಷ್ಟೇ ಅಲ್ಲ, ಕೋವಿಶೀಲ್ಡ್​ಗಿಂತ ದುಪ್ಪಟ್ಟು ಬೆಲೆ ಕೋವಾಕ್ಸಿನ್​ಗೆ ನಿಗದಿಯಾಗಿದೆ. ಜೊತೆಗೆ ತನ್ನ ಲಸಿಕೆಗಳನ್ನು ರಫ್ತು ಮಾಡುವ ಯೋಜನೆಯನ್ನೂ ಹೊಂದಿರುವ ಬಯೋಟೆಕ್ ಕಂಪೆನಿ, ಅದಕ್ಕಾಗಿ ಡೋಸ್​ಗೆ 15 ರಿಂದ 20 ಡಾಲರ್ (1,124 ರೂ. ಗಳಿಂದ 1,499 ರೂ.) ಬೆಲೆ ನಿಗದಿಪಡಿಸಿದೆ ಎನ್ನಲಾಗಿದೆ.

    45 ವರ್ಷ ಮೇಲ್ಪಟ್ಟವರು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದರೆ, ಆದ್ಯತೆಯ ಗುಂಪಿನ ಹೊರಗಿರುವ 18 ರಿಂದ 45 ವರ್ಷ ವಯೋಮಾನದ ಮಂದಿ ಹೀಗೆ ದುಬಾರಿ ಬೆಲೆ ತೆರಬೇಕಾಗುವುದು. ಆಂದ್ರ ಪ್ರದೇಶ, ಉತ್ತರಾಖಂಡ ಮೊದಲಾದ ಕೆಲವು ರಾಜ್ಯ ಸರ್ಕಾರಗಳು ಲಸಿಕೆಯ ವೆಚ್ಚವನ್ನು ತಾವೇ ಭರಿಸಿ ಜನರಿಗೆ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿವೆ. (ಏಜೆನ್ಸೀಸ್)

    ಭಾರತೀಯರಿಗೇ ಅತ್ಯಂತ ದುಬಾರಿಯಾಗಲಿದೆ… ಈ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆ !

    ಕರೊನಾ ಮಧ್ಯೆ ಮತ್ತೊಂದು ದುರಂತ… ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದ ಕಾರ್ಮಿಕರು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts