More

    ‘ಮೇಡ್​ ಇನ್​ ಇಂಡಿಯಾ’ ಕರೊನಾ ಲಸಿಕೆ ಕೋವಾಕ್ಸಿನ್​ಗೆ ವಿಶ್ವ ಮಾನ್ಯತೆ

    ನವದೆಹಲಿ/ಜಿನೀವಾ: ಹಲವು ತಿಂಗಳುಗಳ ಕಾಯುವಿಕೆಯ ನಂತರ ಭಾರತದ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆಯಾದ ಕೋವಾಕ್ಸಿನ್​​ಗೆ ಅಂತೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ)ಯ ಅಂಗೀಕಾರ ಸಿಕ್ಕಿದೆ. ದೀಪಾವಳಿಯ ಈ ಶುಭ ಸಂದರ್ಭಕ್ಕೆ ಹೈದರಾಬಾದ್​​ನ ಕಂಪೆನಿಯಾದ ಭಾರತ್​ ಬಯೋಟೆಕ್​ನ ಉತ್ಪನ್ನವಾದ ಕೋವಾಕ್ಸಿನ್​​ ಲಸಿಕೆಗೆ ಎಮರ್ಜೆನ್ಸಿ ಯೂಸ್​​ ಲಿಸ್ಟಿಂಗ್​​(ಈಯುಎಲ್​) ನೀಡಲಾಗಿದೆ.

    ಡಬ್ಲ್ಯೂಎಚ್​​ಒನ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಈ ನಿಟ್ಟಿನಲ್ಲಿ ಶಿಫಾರಸ್ಸು ಮಾಡಿದ್ದು, ಜಾಗತಿಕ ಮಾನ್ಯತೆ ಪಡೆದ ಕೆಲವೇ ಲಸಿಕೆಗಳ ಪಟ್ಟಿಗೆ ಇದೀಗ ಕೋವಾಕ್ಸಿನ್​ ಕೂಡ ಸೇರಿದೆ. ಇದು ಕೋವಾಕ್ಸಿನ್​ ಪಡೆದ ಭಾರತೀಯರಿಗೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪ್ರಯಾಣ ಮಾಡಲು ಪೂರಕ ಪರಿಸ್ಥಿತಿಯನ್ನುಂಟು ಮಾಡಲಿದೆ. ಜೊತೆಗೆ, ಕೋವಾಕ್ಸಿನ್​​ನ ಉತ್ಪಾದನೆ, ಬಳಕೆ ಮತ್ತು ಅಂತರರಾಷ್ಟ್ರೀಯ ರಫ್ತಿಗೆ ಹೊಸ ಉತ್ತೇಜನ ಲಭಿಸಲಿದೆ.

    ಇದನ್ನೂ ಓದಿ: ಹೈಕೋರ್ಟ್​ ನ್ಯಾಯಾಧೀಶರಾಗಿ ಶಿರಸಿಯ ನ್ಯಾಯವಾದಿ ಎ.ಆರ್​.ಹೆಗಡೆ ನೇಮಕ

    ಐಸಿಎಂಆರ್​​ ಮತ್ತು ಪುಣೆಯ ನಾಷನಲ್ ಇನ್ಸ್​​ಟಿಟ್ಯೂಟ್ ಆಫ್ ವೈರಾಲಜಿಯ ವೈಜ್ಞಾನಿಕ ಸಹಯೋಗದೊಂದಿಗೆ ಭಾರತದಲ್ಲೇ ದೇಶೀಯವಾಗಿ ನಿರ್ಮಿಸಲಾಗಿರುವ ಏಕೈಕ ಲಸಿಕೆ ಕೋವಾಕ್ಸಿನ್​. ಕರೊನಾದ ವಿರುದ್ಧ ಶೇಕಡ 77.8 ರಷ್ಟು ಪರಿಣಾಮಕಾರಿತ್ವ ಮತ್ತು ಹೊಸ ಡೆಲ್ಟಾ ವೇರಿಯೆಂಟ್​ನ ವಿರುದ್ಧ ಶೇಕಡ 65.2 ರಷ್ಟು ಸಂರಕ್ಷಣೆ ಒದಗಿಸುತ್ತದೆ ಎನ್ನಲಾದ ಕೋವಾಕ್ಸಿನ್​ಅನ್ನು ಭಾರತದಲ್ಲಿ ಮಕ್ಕಳಿಗೂ ಬಳಸಲು ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

    ಡಬ್ಲ್ಯೂಎಚ್​ಒ ಡೈರೆಕ್ಟರ್ ಜನರಲ್ ಟೆಡ್ರೋಸ್​ ಅಧನೋಮ್ ಘೆಬ್ರೆಯೆಸಸ್ ಅವರು ಮತ್ತೊಂದು ಲಸಿಕೆ, ಕೋವಾಕ್ಸಿನ್​ಗೆ ಈಯುಎಲ್​ ನೀಡಲಾಗಿರುವುದು ಸಂತಸದ ಸಂಗತಿ ಎಂದು ಟ್ವೀಟ್​ ಮಾಡಿದ್ದಾರೆ. ಕರೊನಾ ವಿರುದ್ಧ ಹೆಚ್ಚು ಉತ್ಪನ್ನಗಳಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ. ಭಾರತ್​ ಬಯೋಟೆಕ್​ನ ಎಂಡಿ ಡಾ.ಕೃಷ್ಣ ಎಲ್ಲಾ ಇದನ್ನು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನಸೂಖ್​ ಮಾಂಡವೀಯ ಅವರು ಇದು ಸಮರ್ಥ ನಾಯಕತ್ವ ಮತ್ತು ಆತ್ಮನಿರ್ಭರ್​ ಭಾರತ್​ ಪರಿಕಲ್ಪನೆಯ ವಿಜಯವಾಗಿದೆ ಎಂದಿದ್ದಾರೆ. ಡಬ್ಲ್ಯೂಎಚ್​ಒಗೆ ಧನ್ಯವಾದ ಹೇಳಿದ್ದಾರೆ. (ಏಜೆನ್ಸೀಸ್)

    ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

    ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts