

ಶಿರಸಿ: ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಶಿರಸಿಯ ಹಿರಿಯ ವಕೀಲರಾದ ಎ.ಆರ್.ಹೆಗಡೆ ಹೂಡ್ಲಮನೆ ನೇಮಕಗೊಂಡಿದ್ದಾರೆ.
ಖ್ಯಾತ ನ್ಯಾಯವಾದಿಯಾಗಿರುವ ಎ.ಆರ್.ಹೆಗಡೆ, ಕಳೆದ 20 ವರ್ಷಗಳಿಗೂ ಅಧಿಕ ಕಾಲದಿಂದ ಶಿರಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯದ ಕೊಲಿಜಿಯಂನಿಂದ ಎ.ಆರ್.ಹೆಗಡೆ ಅವರ ಹೆಸರು ಶಿಫಾರಸ್ಸು ಮಾಡಿ, ಸುಪ್ರೀಂ ಕೊಲಿಜಿಯಂನಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇದೀಗ ರಾಷ್ಟ್ರಪತಿ ಅಂಕಿತ ದೊರೆತಿದ್ದು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.