ಕುಳಿತಲ್ಲಿಂದಲೇ ದೆಹಲಿಯ ಮಾರುಕಟ್ಟೆಯಲ್ಲಿ ಶಾಪಿಂಗ್! ಕೇಜ್ರಿವಾಲ್​ರ ಹೊಸ ಯೋಜನೆ

arvind kejriwal
Published on

ನವದೆಹಲಿ: ದೆಹಲಿಯ ಎಷ್ಟೋ ವಸ್ತುಗಳು ಜನಪ್ರಿಯವಾಗಿದ್ದು, ದೇಶದಾದ್ಯಂತದ ಜನರು ಅಲ್ಲಿ ಶಾಪಿಂಗ್​ ಮಾಡುವ ಆಸೆ ಹೊಂದಿರುತ್ತಾರೆ. ಇಂತಹ ಆಸೆಗೆ ಇನ್ನು ಕೆಲವು ತಿಂಗಳಲ್ಲಿ ರೆಕ್ಕೆಗಳು ಸಿಗಲಿವೆ. ಏಕೆಂದರೆ, ದೆಹಲಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಆನ್​ಲೈನ್​ ಮೂಲಕ ಪಡೆಯುವ ವಿಶಿಷ್ಟ ಪೋರ್ಟಲ್​ಅನ್ನು ದೆಹಲಿ ಸರ್ಕಾರ ನಿರ್ಮಿಸಲಿದೆ.

ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ವೃತ್ತಿಶೀಲರು ತಮ್ಮ ಉತ್ಪನ್ನಗಳನ್ನು ಜಗತ್ತಿನ ಎಲ್ಲೆಡೆಗೂ ಮಾರಾಟ ಮಾಡಲು ಸಾಧ್ಯವಾಗುವಂತಹ 'ದೆಹಲಿ ಬಜಾರ್​​' ವೆಬ್​ ಪೋರ್ಟಲ್​ಅನ್ನು ಶೀಘ್ರವೇ ಲಾಂಚ್​ ಮಾಡಲಾಗುವುದು ಎಂದಿದ್ದಾರೆ.

ದೆಹಲಿಯ ಖ್ಯಾತ ಹೌಜ್​ ಖಾಸ್​, ಖಾನ್​ ಮಾರ್ಕೆಟ್​ ಮುಂತಾದೆಡೆಗಳಿಂದ ಇಡೀ ಜಗತ್ತಿನಾದ್ಯಂತದ ಕೊಳ್ಳುಗರು ನೇರವಾಗಿ ಸಾಮಾನುಗಳನ್ನು ಖರೀದಿಸಬಹುದು ಎಂದು ಘೋಷಿಸಿರುವ ಕೇಜ್ರಿವಾಲ್​, ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಬಿಸಿನೆಸ್​ಮೆನ್​ಗಳಿಗೆ ಇದು ತಮ್ಮ ದೊಡ್ಡ ಸುದ್ದಿ ಎಂದಿದ್ದಾರೆ. ಅಲ್ಲಿನ ಇಡೀ ಮಾರುಕಟ್ಟೆ ಈ ಪೋರ್ಟಲ್​ನಲ್ಲಿ ಲಭ್ಯವಾಗಲಿದ್ದು, ದೆಹಲಿಯ ಜಿಡಿಪಿಯನ್ನು, ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net