ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

ಎದೆಯ ಭಾಗದ ಅಂಗಗಳಾದ ಹೃದಯ ಮತ್ತು ಶ್ವಾಸಕೋಶಗಳಿಗೆ ಉತ್ತಮ ವ್ಯಾಯಾಮ ನೀಡುವುದರೊಂದಿಗೆ ತೋಳುಗಳಿಗೆ ಬಲ ನೀಡುವ ಆಸನವೆಂದರೆ ವೃಶ್ಚಿಕಾಸನ. ವೃಶ್ಚಿಕ ಎಂದರೆ ಸಂಸ್ಕೃತದಲ್ಲಿ ಚೇಳು. ಚೇಳಿನಂತೆ ಕಾಣಿಸುವ ಭಂಗಿ ಇದರಲ್ಲಿದೆ. ಇದನ್ನು ಇಂಗ್ಲಿಷಿನಲ್ಲಿ Scorpion Pose ಎಂದು ಕರೆಯುತ್ತಾರೆ. ಅತ್ಯಂತ ಕ್ಲಿಷ್ಟಕರವಾದ ಈ ಆಸನವನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ ಮತ್ತು ಯೋಗ ಸ್ಪರ್ಧೆಗಳಲ್ಲಿ ಹೆಚ್ಚು ಅಂಕ ಗಳಿಸಲು ಬಳಸಲಾಗುತ್ತದೆ. ಪ್ರಯೋಜನಗಳು: ಕಾಲುಗಳನ್ನು ಬಲಪಡಿಸುತ್ತದೆ. ಸೊಂಟ ಮತ್ತು ಎದೆಯ ಸ್ನಾಯುಗಳನ್ನು ಬಲಗೊಳಿಸುತ್ತದೆ. ಭುಜಗಳು, ತೋಳುಗಳು ಮತ್ತು … Continue reading ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!