More

    ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

    ಎದೆಯ ಭಾಗದ ಅಂಗಗಳಾದ ಹೃದಯ ಮತ್ತು ಶ್ವಾಸಕೋಶಗಳಿಗೆ ಉತ್ತಮ ವ್ಯಾಯಾಮ ನೀಡುವುದರೊಂದಿಗೆ ತೋಳುಗಳಿಗೆ ಬಲ ನೀಡುವ ಆಸನವೆಂದರೆ ವೃಶ್ಚಿಕಾಸನ. ವೃಶ್ಚಿಕ ಎಂದರೆ ಸಂಸ್ಕೃತದಲ್ಲಿ ಚೇಳು. ಚೇಳಿನಂತೆ ಕಾಣಿಸುವ ಭಂಗಿ ಇದರಲ್ಲಿದೆ. ಇದನ್ನು ಇಂಗ್ಲಿಷಿನಲ್ಲಿ Scorpion Pose ಎಂದು ಕರೆಯುತ್ತಾರೆ. ಅತ್ಯಂತ ಕ್ಲಿಷ್ಟಕರವಾದ ಈ ಆಸನವನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ ಮತ್ತು ಯೋಗ ಸ್ಪರ್ಧೆಗಳಲ್ಲಿ ಹೆಚ್ಚು ಅಂಕ ಗಳಿಸಲು ಬಳಸಲಾಗುತ್ತದೆ.

    ಪ್ರಯೋಜನಗಳು: ಕಾಲುಗಳನ್ನು ಬಲಪಡಿಸುತ್ತದೆ. ಸೊಂಟ ಮತ್ತು ಎದೆಯ ಸ್ನಾಯುಗಳನ್ನು ಬಲಗೊಳಿಸುತ್ತದೆ. ಭುಜಗಳು, ತೋಳುಗಳು ಮತ್ತು ಬೆನ್ನನ್ನು ಬಲಪಡಿಸುತ್ತದೆ. ವೃಶ್ಚಿಕಾಸನ ಅಭ್ಯಾಸ ಮಾಡುವುದರಿಂದ ಬೆನ್ನುಮೂಳೆಯ ನಮ್ಯತೆ ಸುಧಾರಿಸುತ್ತದೆ. ಈ ಆಸನ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತದೆ.

    ಇದನ್ನೂ ಓದಿ: ಬೆನ್ನುಮೂಳೆ ಬಲಗೊಳಿಸಲು, ಹೊಟ್ಟೆಯ ಬೊಜ್ಜು ಕರಗಿಸಲು ಈ ಆಸನ ಮಾಡಿ!

    ಬೆನ್ನೆಲುಬಿನ ತಳಭಾಗ, ಬೆನ್ನು-ಸೊಂಟಕ್ಕೆ ಸಾಕಷ್ಟು ವ್ಯಾಯಾಮ ಒದಗಿಬರುವಂತಹ ಯೋಗಾಸನವಿದು. ಶ್ವಾಸಕೋಶದ ಅಂಗಗಳ ಆರೋಗ್ಯ ವರ್ಧನೆಯಾಗಿ ಲಂಗ್ಸ್​ ಕಪಾಸಿಟಿ ಹೆಚ್ಚುತ್ತದೆ. ಹೃದಯಕ್ಕೆ ಮಸಾಜ್​ ದೊರಕಿದಂತಾಗಿ ಹೃದಯದ ನಮ್ಯತೆ ಹೆಚ್ಚುತ್ತದೆ.

    ಅಭ್ಯಾಸಕ್ರಮ: ಕಾರ್ಪೆಟ್​ ಮೇಲೆ ಮೊಣಕಾಲೂರಿ ಕೂತು ಕೈಗಳನ್ನು ಮುಂದಕ್ಕೆ ಊರುವುದು. ತೋಳುಗಳ ಆಧಾರದ ಮೇಲೆ ಬ್ಯಾಲೆನ್ಸ್​ ಮಾಡಿಕೊಂಡು, ಹಿಂದಿನಿಂದ ಕಾಲುಗಳನ್ನು ಮಡಿಚಿ ಪಾದಗಳನ್ನು ತಲೆಗೆ ಮೃದುವಾಗಿ ಸ್ಪರ್ಶಿಸಬೇಕು. ಹಾಗೇ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ಕಾಲುಗಳನ್ನು ಕೆಳಕ್ಕೆ ತಂದು ವಿಶ್ರಮಿಸಬೇಕು.

    ಇದನ್ನೂ ಓದಿ: ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾದ ‘ಉತ್ಥಿತ ಪದ್ಮಾಸನ’

    ವೃಶ್ಚಿಕಾಸನವು ಬೆಳವಣಿಗೆಗೆ ಪೂರಕವಾದುದು. ಆದರೆ, ತೀರಾ ಚಿಕ್ಕ ವಯಸ್ಸಿನ ಮಕ್ಕಳು ಮಾಡಬಾರದು. 12 ರಿಂದ 14 ವರ್ಷ ಮೇಲ್ಪಟ್ಟವರು ಈ ಆಸನವನ್ನು ಅಭ್ಯಾಸ ಮಾಡಬಹುದು. ಗುರುಮುಖೇನ ಕಲಿತು ಜಾಗರೂಕತೆಯಿಂದ ಮಾಡಬೇಕು. ಸೊಂಟ ಅಥವಾ ಬೆನ್ನಿನ ಸಮಸ್ಯೆಗಳಿರುವವರು, ಅಧಿಕ ರಕ್ತದೊತ್ತಡ, ಗ್ಲೂಕೋಮ ಅಥವಾ ಇತರ ಸಮಸ್ಯೆ ಇರುವವರು ಈ ಆಸನ ಮಾಡಬಾರದು.

    ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

    ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts