More

    5ರಿಂದ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ: ಡಿಸಿಜಿಐ ಅನುಮತಿ

    ನವದೆಹಲಿ: ಕರೊನ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ನೀಡಲು ಉದ್ದೇಶಿಸಿರುವ  ಕೊರ್ಬೆವ್ಯಾಕ್ಸ್​​ ಮತ್ತು ಕೋವ್ಯಾಕ್ಸಿನ್​ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದೆ.

    5-12 ವರ್ಷದೊಳಗಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್​​ ಮತ್ತು 6 -12 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್​ ನೀಡಬಹುದಾಗಿದೆ. ಸದ್ಯಕ್ಕೆ ಮಕ್ಕಳಿಗೆ ಎರಡು ರೀತಿಯ ಲಸಿಕೆ​ ನೀಡಬಹುದಾಗಿದೆ ಎಂದು ಡಿಸಿಜಿಐ ತಿಳಿಸಿದೆ.

    ಕಳೆದ ವರ್ಷ ಅಕ್ಟೋಬರ್​ನಲ್ಲಿ 12 ರಿಂದ 18 ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್​​ ಲಸಿಕೆ ಅನುಮತಿ ನೀಡಲಾಗಿತ್ತು. ಈ ಮೊದಲು 2 ವರ್ಷ ಮಕ್ಕಳಿಂದಲೇ ನೀಡುವ ಬಗ್ಗೆ ಯೋಜಿಸಲಾಗಿತ್ತಾದರೂ, ಡಿಜಿಸಿಎ ಅನುಮತಿ ನೀಡಿರಲಿಲ್ಲ.

    ಇದೀಗ ಏಪ್ರಿಲ್​ 21 ರಂದು ತಜ್ಱರ ಸಮಿತಿ ಕೊರ್ಬೆವ್ಯಾಕ್ಸ್​​ ಲಸಿಕೆ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದಾಗಿದೆ ಎಂದು ವರದಿ ನೀಡಿತ್ತು.

    ಎಚ್ಚರ..ಅಧಿಕ ತೂಕ ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗುತ್ತಂತೆ: ಅಧ್ಯಯನ

    ಮುಂದೆಯೂ ನೀವೇ ಸಿಎಂ ಆಗಿಬಿಡಿ ಹೀಗೆಂದು ಶಾಸಕ ಯತ್ನಾಳ್ ಅಂದಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts