More

    ಕರೊನಾ ಮಧ್ಯೆ ಮತ್ತೊಂದು ದುರಂತ… ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದ ಕಾರ್ಮಿಕರು !

    ಮುಂಬೈ : ಮಹಾರಾಷ್ಟ್ರದಲ್ಲಿ ಕಠಿಣ ಲಾಕ್​ಡೌನ್ ಜಾರಿಯಾಗುತ್ತಿರುವ ಪರಿಣಾಮ ಗ್ರಾಹಕರಿಗೆ ಮದ್ಯ ಸಿಗುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯವ್ಯಸನಿಗಳು ಹೊಸತೊಂದು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಯಾವತ್​ಮಲ್ ಜಿಲ್ಲೆಯ ವಾಣಿ ಪಟ್ಟಣದಲ್ಲಿ ಆರು ಜನರು ಮದ್ಯಕ್ಕೆ ಬದಲಿಯಾಗಿ ಆಲ್ಕೊಹಾಲ್​ ಅಂಶ ಇರುವ ಸಾನಿಟೈಸರ್ ಅನ್ನು ಸೇವಿಸಿ ದುರ್ಮರಣಕ್ಕೀಡಾಗಿದ್ದಾರೆ.

    “ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರು ಜನರು ಮದ್ಯದ ಬದಲಿಯಾಗಿ ಸ್ಯಾನಿಟೈಸರ್ ಕುಡಿದು ಸಾವಪ್ಪಿದ್ದಾರೆ. ಮೂವರು ಮನೆಯಲ್ಲೇ ಅಸುನೀಗಿದ್ದರೆ, ಮೂವರು ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಯಾವತ್​ಮಲ್ ಎಸ್ಪಿ ದಿಲೀಪ್ ಭುಜಬಲ್ ಹೇಳಿದ್ದಾರೆ. ಮೃತರನ್ನು ವಾಣಿ ಪಟ್ಟಣದ ನಿವಾಸಿಗಳಾಗಿದ್ದ ಸುನಿಲ್ ಧೇಂಗ್ಲೆ (32), ದತ್ತ ಲಂಜೇವರ್ (57), ಭರತ್ ರೂಯಿಕರ್ (38), ಗಣೇಶ್ ಶೇಲರ್ (45), ಸಂತೋಷ್ ಮೆಹ್ರೆ (35) ಮತ್ತು ರಾಹುಲ್ ಪಾರ್ಥಟ್ಕರ್ (35) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್

    “ಮೃತರು ಕೆಲವು ದಿನಗಳಿಂದ ಸ್ಯಾನಿಟೈಸರ್ ಬಾಟಲಿಗಳನ್ನು ಖರೀದಿಸಿ 2 ರಿಂದ 5 ಬಾಟಲಿಗಳು ಸೇವಿಸುತ್ತಿದ್ದರು. ಮೂವರಿಗೆ ವಾಂತಿ, ಹೊಟ್ಟೆನೋವು ಉಂಟಾದಾಗ ಏಪ್ರಿಲ್ 23 ರಂದು ಆಸ್ಪತ್ರೆ ಸೇರಿದ್ದರು. ಆದರೆ ಮೂರು ಗಂಟೆಗಳಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದರು. ಇದೇ ರೀತಿ ಇನ್ನೂ ಮೂವರು ಸತ್ತಿರುವುದು ತಿಳಿದುಬಂತು. ಅವರ ಸಂಬಂಧಿಕರು ವಿಷಯ ತಿಳಿಸದೆ ಅಂತ್ಯಕ್ರಿಯೆಯನ್ನೂ ಮಾಡಿಬಿಟ್ಟಿದ್ದಾರೆ. ಆರೂ ಕೇಸುಗಳಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದೇವೆ” ಎಂದು ಎಸ್ಪಿ ಭುಜಬಲ್ ಹೇಳಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಜಾರಿಯಲ್ಲಿದೆ : ದಿನೇಶ್ ಗುಂಡೂರಾವ್

    ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್​ಗಳನ್ನು ಇನ್ನೂ ಸ್ಥಾಪಿಸಿಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts