More

    ಕೊಳಚೆ ನೀರಿಗೂ ವಕ್ಕರಿಸಿದೆ ಕರೊನಾ; ಚೆನ್ನೈ ಬಳಿಕ ಅಹಮದಾಬಾದ್​ ಸರದಿ

    ನವದೆಹಲಿ: ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವುದೇಕೆ ಹಾಗೂ ಇದರ ನಿಗ್ರಹಕ್ಕೊಂದು ಮುನ್ಸೂಚನಾ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ನಡೆಯುತ್ತಿವೆ.

    ಅಂತೆಯೇ, ಗುಜರಾತ್​ನ ಗಾಂಧಿನಗರದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ ಸಂಶೋಧಕರು ಕೊಳಚೆ ನೀರಿನಲ್ಲಿ ಕರೊನಾ ವೈರಸ್​ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಮೂಲಕ ದೇಶಾದ್ಯಂತ ಕೊಳಚೆ ನೀರಿನಲ್ಲಿ ಇರಬಹುದಾದ ವೈರಸ್​ ಕುರುಹುಗಳ ಪತ್ತೆ, ನಿಗಾ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಅಗತ್ಯದ ಮಹತ್ವವನ್ನು ಇದು ಎತ್ತಿ ತೋರಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

    ಇದನ್ನೂ ಓದಿ; ಎರಡು ದಿನ ತಡವಾಗಿದ್ದರೆ ಸಿಮೆಂಟ್​ ಕಂಪನಿಯಿಂದಲೇ 17 ಕೋಟಿ ರೂ. ಪಡೀತಿದ್ದ ಉದ್ಯೋಗಿ….!

    ಈ ಹಿಂದೆ ಚೆನ್ನೈನಲ್ಲೂ ಕೊಳಚೆ ನೀರಿನಲ್ಲಿ ಕರೊನಾ ವೈರಸ್​ ಕುರುಹುಗಳನ್ನು ಪತ್ತೆಹಚ್ಚಲಾಗಿತ್ತು. ಇದಲ್ಲದೇ ಆಸ್ಟ್ರೇಲಿಯಾ, ನೆದರ್ಲೆಂಡ್​, ಫ್ರಾನ್ಸ್, ಅಮೆರಿಕದಲ್ಲೂ ಕೊಳಚೆ ನೀರಿನಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ.

    ಜಾಗತಿಕ ಯೋಜನೆ: ಕಳೆದ ಎಪ್ರಿಲ್​ನಲ್ಲಿ ಜಗತ್ತಿನ 51 ಪ್ರಮುಖ ಸಂಶೋಧನಾ ಸಂಸ್ಥೆಗಳು ಕೈಗೊಂಡ ಸಂಶೋಧನೆಯ ಭಾಗವಾಗಿ ಗಾಂಧಿನಗರ ಐಐಟಿ ಈ ಅಧ್ಯಯನ ನಡೆಸಿತ್ತು. ಇದರ ಮೂಲಕ ಮುನ್ಸೂಚನಾ ವ್ಯವಸ್ಥೆಯೊಂದನ್ನು ರೂಪಿಸುವ ಗುರಿ ಹೊಂದಲಾಗಿದೆ.
    ಲಾಕ್​ಡೌನ್​ ಅವಧಿಯಲ್ಲಿ ಅಂದರೆ ಮೇ 8 ರಿಂದ 27 ರ ನಡುವೆ ಸಂಗ್ರಹಿಸಲಾದ ಕೊಳಚೆ ನೀರಿನ ಮಾದರಿಯಲ್ಲಿ ವೈರಸ್​ನ ಕುರುಹುಗಳು ಪತ್ತೆಯಾಗಿವೆ. ವ್ಯಕ್ತಿಗಳಲ್ಲಿ ಕರೊನಾ ಪತ್ತೆಗೆ ಪೂರಕವಾಗಿ ಈ ಅಧ್ಯಯನ ನಡೆಸಲಾಗಿದೆ. ಕೋವಿಡ್​ ಗುಣಲಕ್ಷಣಗಳಿರುವ ವ್ಯಕ್ತಿಯಲ್ಲಿ ಮಾತ್ರವಲ್ಲದೇ, ಯಾವುದೇ ಗುಣಲಕ್ಷಣವಿಲ್ಲದ ವ್ಯಕ್ತಿಯ ದೇಹದ ಮಲ ಅಥವಾ ತ್ಯಾಜ್ಯದಿಂದ ಕರೊನಾ ವೈರಸ್​ ಹೊರಬರುತ್ತದೆ. ಈ ಕಾರಣದಿಂದಾಗಿ ಕೊಳಚೆ ನೀರಿನ ಪರೀಕ್ಷೆ ಅತ್ಯಗತ್ಯವಾಗಿದೆ ಎಂದು ಐಐಟಿ ಪ್ರಾಧ್ಯಾಪಕ ಮನೀಷ್​ಕುಮಾರ್​ ಹೇಳಿದ್ದಾರೆ. ಅಧ್ಯಯನದಲ್ಲಿ ಕಂಡುಬಂದ ಫಲಿತಾಂಶವನ್ನು ಅಂತಾರಾಷ್ಟ್ರೀಯ ತಜ್ಞರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ; ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

    ಒಂದು ಸಮಾಧಾನದ ವಿಷಯವೆಂದರೆ, ಕರೊನಾ ವೈರಸ್​ ಕೊಳಚೆ ನೀರಿನಿಂದ ಹಬ್ಬುತ್ತದೆ ಎಂಬುದು ಎಲ್ಲಿಯೂ ಖಚಿತಪಟ್ಟಿಲ್ಲ. ಜತೆಗೆ ನೀರಿನ ತಾಪಮಾನ ಕೂಡ ಈ ವೈರಸ್​ ಜೀವಿತಾವಧಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಕುಮಾರ್​ ಮಾಹಿತಿ ನೀಡಿದ್ದಾರೆ.

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts