ಆರು ತಿಂಗಳ ಗರ್ಭಿಣಿಯನ್ನು ರೇಪ್​ ಮಾಡಿ ಮದುವೆಯಾದ! ಇನ್ನೂ ಮೂರು ಜನರ ಜತೆ ಮಲಗೆಂದು ಹೇಳಿದ!

preganant
Published on

ಕೊಲ್ಹಾಪುರ: ಅಸ್ಸಾಂ ಗರ್ಭವತಿ ಮಹಿಳೆಯನ್ನು ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಅಪಹರಿಸಿ, ರೇಪ್​ ಮಾಡಿ, ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಇಷ್ಟೆಲ್ಲವಾದ ಮೇಲೆ ಅವರು ಮಹಿಳೆಯನ್ನು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಕರೆತಂದು ಕೂಡಿ ಹಾಕಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.

ಮಹಿಳೆ ಆರು ತಿಂಗಳ ಗರ್ಭಿಣಿ. ಆಕೆಯನ್ನು ಅಸ್ಸಾಂನಿಂದ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ. ಮಹಿಳೆ ಮತ್ತು ಆಕೆಯ ಮೂರು ವರ್ಷದ ಮಗಳಿಗೆ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟು ಅಪಹರಿಸಲಾಗಿದೆ. ಮಹಿಳೆಯನ್ನು ಅಸ್ಸಾಂನಿಂದ ರಾಜಸ್ಥಾನಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬ ಆಕೆಯನ್ನು ಮದುವೆಯೂ ಆಗಿದ್ದಾನೆ. ನಾವು ಹೇಳಿದಂತೆ ಕೇಳದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮದುವೆ ಮಾಡಿಕೊಳ್ಳಲಾಗಿದೆ.

ಮದುವೆಯಾದ ನಂತರ ಮಹಿಳೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ ಸನಿಹದ ಹಳ್ಳಿಯೊಂದಕ್ಕೆ ಕರೆತರಲಾಗಿದ್ದು, ಅಲ್ಲಿ ಆಕೆಯೊಂದಿಗೆ ಇಬ್ಬರು ಆರೋಪಿಗಳು ಜೀವನ ನಡೆಸಲು ಆರಂಭಿಸಿದ್ದಾರೆ. ಇನ್ನೂ ಮೂರು ಸ್ನೇಹಿತರಿದ್ದಾರೆ, ಅವರೊಂದಿಗೆ ನೀನು ಮಲಗಬೇಕು ಎಂದೂ ಹೇಳಿದ್ದಾರೆ. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಕಾಯುತ್ತಿದ್ದ ಮಹಿಳೆ ಭಾನುವಾರದಂದು ಆರೋಪಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ. ಕೊಲ್ಹಾಪುರ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಆರೋಪಿಗಳು ಅಸ್ಸಾಂನ ಮಹಿಳೆಯನ್ನು ಅಪಹರಿಸಿ, ಮಹಾರಾಷ್ಟ್ರದಲ್ಲಿ ಜೀವನ ನಡೆಸಲು ಕಾರಣವೇನು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net