ಹೊಸಬರಿಗೆ ಅವಕಾಶ ಕೊಡಲು ಚುನಾವಣಾ ರಾಜಕೀಯಕ್ಕೆ ಗುಡ್​ ಬೈ ಹೇಳಿದ ಪ್ರತಾಪಚಂದ್ರ ಶೆಟ್ಟಿ!

Pratapachandra Shetty
Published on

ಕುಂದಾಪುರ: ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೊಸಬರಿಗೆ ಅವಕಾಶ ಸಿಗಬೇಕು. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವೆ ಎಂದು ಮಾಜಿ ಶಾಸಕ, ಎಂಎಲ್​ಸಿ ಕೆ.ಪ್ರತಾಪಚಂದ್ರ ಶೆಟ್ಟಿ ಘೋಷಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಎರಡನೇ ಸ್ಥಾನದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಚುನಾವಣೆ ರಾಜಕೀಯದಿಂದ ದೂರ ಉಳಿಯುವೆ, ಪಕ್ಷ ಬಯಸಿದರೆ ಸೇವೆಗೆ ಸಿದ್ಧ, ಆದರೆ ಚುನಾವಣೆಗೆ ಸ್ಪರ್ಧಿಸಲ್ಲ. ರೈತ ಸಂಘದ ಮೂಲಕ ಸಾಮಾಜಿಕ ಕಾರ್ಯವನ್ನೂ ಮಾಡುವೆ ಎಂದು ಪ್ರತಾಪಚಂದ್ರ ಶೆಟ್ಟಿ ಬುಧವಾರ 'ವಿಜಯವಾಣಿ'ಗೆ ತಿಳಿಸಿದರು.

4 ಬಾರಿ ಶಾಸಕ, 3 ಸಲ ಎಂಎಲ್​ಸಿ ಆಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆಯಾಗಿದ್ದರು. ಇಂದಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನದ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಇದೇ ವೇಳೆ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.

1983ರಲ್ಲಿ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಜತೆ ವಿಧಾನಸಭೆ ಪ್ರಶಿಸಿದ್ದ ಪ್ರತಾಪಚಂದ್ರ ಶೆಟ್ಟಿ, ಸತತ 4 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. 1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಎದುರು 1140 ಮತಗಳ ಅಂತರದಲ್ಲಿ ಪರಾಭವಗೊಂಡ ನಂತರ ಚುನಾವಣಾ ಕಣಕ್ಕೆ ಇಳಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net