ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ನಾಳೆ ಸಂಜೆ ಅಂತ್ಯಕ್ರಿಯೆ

Puneeth
Published on

ಬೆಂಗಳೂರು: ಬಹುಬೇಡಿಕೆಯ ನಟ, ಕೋಟ್ಯಂತರ ಅಭಿಮಾನಿಗಳ ಮನದಲ್ಲಿ 'ಅರಸ'ನಂತೆ ಮೆರೆದಿದ್ದ 'ಯುವರತ್ನ' ಕಿರಿಯ ವಯಸ್ಸಲ್ಲೇ ಬಾರದೂರಿಗೆ ಪಯಣ ಬೆಳೆಸಿದ್ದು, 'ವೀರಕನ್ನಡಿಗ'ನನ್ನ ಕಳೆದುಕೊಂಡ ಕರುನಾಡಿನ ಜನತೆ ಪ್ರೀತಿಯ 'ಅಪ್ಪು'ಗಾಗಿ ಕಣ್ಣೀರು ಹಾಕುತ್ತಿದೆ.

'ದೊಡ್ಮನೆ ಹುಡುಗ'ನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ 'ರಾಜಕುಮಾರ'ನ ಅಂತ್ಯಕ್ರಿಯೆ ನೆರವೇರಲಿದ್ದು, ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಪುನೀತ್​ರ ಸದಾಶಿವನಗರದ ನಿವಾಸಕ್ಕೆ ಪ್ರಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗಲಾಗುತ್ತಿದೆ. ಬಳಿಕ ಕಂಠೀರವ ಸ್ಟೇಡಿಯಂ ಬಳಿ ಸಾರ್ವಜನಿಕರು ದರ್ಶನ ಪಡೆಯಲು ಅವಕಾಶ ಸಿಗಲಿದೆ. ಅಮೆರಿಕದಲ್ಲಿರುವ ಅಪ್ಪು ಅವರ ಹಿರಿಯಪುತ್ರಿ ಭಾರತಕ್ಕೆ ಆಗಮಿಸುತ್ತಿದ್ದು, ಅವರು ಬಂದ ಕೂಡಲೇ ಪುನೀತ್​ ಅವರ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net