

ಕಲಬುರಗಿ: ಅಂಗವಿಕಲ ಸ್ವಾಮಿಯೋರ್ವರನ್ನು ಮೇಲೆ ಪೊಲೀಸ್ ಕಾನ್ಸ್ಟೆಬಲ್ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರೇವೂರು ಗಿರಿಮಲ್ಲಿಕಾರ್ಜುನ ಗುಡ್ಡ ಮಠದ ಶಿವಾನಂದ ಮೂರ್ತಿ ಸ್ವಾಮಿ ಅವರು ಭಕ್ತರಿಂದ ಧಾನ್ಯ ಸಂಗ್ರಹ ಮಾಡಲು ಹೋಗಿದ್ದಾಗ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ಪೋಸ್ಟ್ ಬಳಿ, ರೇವೂರು ಪೊಲೀಸ್ ಠಾಣೆ ಪೇದೆ ಶರಣಗೌಡ ಪಾಟೀಲ್ ಶಿವಾನಂದಮೂರ್ತಿ ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ವಾಮೀಜಿಯೇ ತಿಳಿಸಿದ್ದಾರೆ.
ನಾವು ಧಾನ್ಯ ಸಂಗ್ರಹ ಮಾಡಲು ಹೋಗಿದ್ದೆವು. ನಮ್ಮನ್ನು ನೋಡುತ್ತಲೇ ಕೆಟ್ಟ ಶಬ್ದಗಳಿಂದ ನಿಂದಿಸಿದ ಪೇದೆ ಹಲ್ಲೆಯನ್ನೂ ಮಾಡಿದ್ದಾರೆ. ಕೈ ಮುಗಿದರೂ ಬಿಡಲಿಲ್ಲ. ಕೈ ಮೇಲೆಯೇ ಹೊಡೆದಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸದ್ಯ ಅವರ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ರೈತರ ಸಂಕಷ್ಟ ನಿವಾರಣೆಗೆ ಹೊಸ ಆಪ್ ಅನ್ನದಾತ