VIDEO: ಬೈಕ್​ ಸಮೇತ ಡ್ರೈನೇಜ್​​ ಗುಂಡಿಗೆ ಬಿದ್ದ ಪೊಲೀಸ್​​​ ದಂಪತಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ದೃಶ್ಯ

Drinage
Published on

ಲಖನೌ: ಮಳೆ ಬಂದಾಗಲೆಲ್ಲಾ ರಸ್ತೆಯೆಲ್ಲಾ ಗುಂಡಿಗಳಿಂದ ತುಂಬಿರುತ್ತವೆ. ಎಷ್ಟೇ ಜಾಗಕರೂಕತೆ ವಹಿಸಿದರೂ ಕೆಲವೊಮ್ಮೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಸದ್ಯ ಇಲ್ಲೊಂದ ಬೆಚ್ಚಿ ಬೀಳಿಸುವ ದೃಶ್ಯ ಸೆರೆಯಾಗಿದೆ. ದ್ವಿಚಕ್ರ ವಾಹನದಲ್ಲಿ ತನ್ನ ಪತ್ನಿಯೊಂದಿಗೆ ರಸ್ತೆಯಲ್ಲಿ ಪಾರ್ಕಿಂಗ್​ ಮಾಡಲು ಪೇದೆಯೊಬ್ಬರು ಬರುತ್ತಾರೆ. ಮಳೆ ನೀರಿನಿಂದ ತುಂಬಿದ ರಸ್ತೆಯಲ್ಲಿ ಏನೂ ಕಾಣಿಸುವುದಿಲ್ಲ. ಅಲ್ಲೇ ಪಕ್ಕದಲ್ಲೇ ಇತರೆ ವಾಹನಗಳು ನಿಂತಿರುತ್ತವೆ. ಅದೇ ಭರವಸೆ ಮೇಲೆ ಹೊರಟ ಈ ಪೇದೆ ಬೈಕ್​​ ಅನ್ನು ಮುಂದೆ ತರುತ್ತಾರೆ.ಆಗಲೇ ಗೊತ್ತಾಗಿದ್ದು, ಇಲ್ಲಿ ಡ್ರೈನೇಜ್​ ಗುಂಡಿ ಇದೆ ಎಂದು. ಬೈಕ್​ ಸಮೇತ ದಂಪತಿ ಮುಳುಗುತ್ತಾರೆ. ಇದನ್ನು ನೋಡಿದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು. ಇಬ್ಬರನ್ನೂ ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸದ್ಯ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಿಗಢದಲ್ಲಿ. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ನಿವೃತ್ತ ಐಎಎಸ್​ ಅಧಿಕಾರಿ ಸೂರ್ಯ ಪ್ರತಾಪ್​ ಸಿಂಗ್​, ಅಲಿಗಢದ ಸ್ಮಾರ್ಟ್​ ಸಿಟಿಯ ಗೌರವ ಯಾರಿಗೆ ನೀಡಬೇಕು ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net