ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ

Emmanyuel
Published on

ಪ್ಯಾರಿಸ್​: ಫ್ರೆಂಚ್​ ಅಧ್ಯಕ್ಷ ಇಮ್ಯಾನ್ಯುಯಲ್​ ಮ್ಯಾಕ್ರಾನ್​ ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದು, ಸದ್ಯ ಪರಿಸ್ಥಿತಿಯಲ್ಲಿ ಫ್ರಾನ್ಸ್​​ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸ್ಥಿತಿ ಎದುರಾಗಿದೆ.

ಅಧ್ಯಕ್ಷ ಮ್ಯಾಕ್ರಾನ್​ ರಾಷ್ಟ್ರೀಯ ಸಂಸತ್​​ನ ಮೇಲಿತ ಹಿಡಿತವನ್ನು ಕಳೆದುಕೊಂಡಿದ್ದು, ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಮಿತ್ರಪಕ್ಷಗಳು ಹಾಗೂ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸರ್ಕಾರ ಮುಂದುವರಿಯುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮ್ಯಾಕ್ರಾನ್ ನೇತೃತ್ವದ ಕೇಂದ್ರೀಯ ಎನ್ಸೆಂಬಲ್ ಒಕ್ಕೂಟ ಬಹುಮತ ಪಡೆಯುವ ನಿರೀಕ್ಷೆ ಇತ್ತು. ಆದರೆ ಭಾನುವಾರ ನಡೆದ ಚುನಾವಣೆಯಲ್ಲಿ ಅಂತಿಮ ಹಂತದಲ್ಲಿ ಬಹುಮತಕ್ಕೆ ಅಗತ್ಯವಿದ್ದ 289 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ.

ನಾವು ನಿರೀಕ್ಷಸಿದ್ದಕ್ಕಿಂತ ಕಡಿಮೆ ಸ್ಥಾನ ಗಳಿಸಿದ್ದೇವೆ, ಇದು ನಿರಾಶಾದಾಯಕವಾಗಿದ್ದರೂ, ಇತರ ಪಕ್ಷಗಳ ಸಹಕಾರ ಸಿಗುವ ಭರವಸೆ ಇದೆ ಎಂದು ಸರ್ಕಾರದ ವಕ್ತಾರ ಒಲಿವಿಯಾ ಗ್ರೆಒಯಿರ್​​ ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net