ಕಾರವಾರದಲ್ಲಿ ಕಚೇರಿಯಲ್ಲೇ ಪೊಲೀಸ್ ಪೇದೆ ಆತ್ಮಹತ್ಯೆ

New Project (17)
Published on

ಉತ್ತರಕನ್ನಡ: ಕೆಲಸಕ್ಕೆ ಬಂದ ಪೊಲೀಸ್ ಕಾನ್​ಸ್ಟೇಬಲ್​ವೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರದ ಡಿ.ಆರ್. ಕಚೇರಿಯಲ್ಲಿ ಸಂಭವಿಸಿದೆ.

ಗುರುಪ್ರಸಾದ್ ನಾಯ್ಕ್(35) ಆತ್ಮಹತ್ಯೆ ಮಾಡಿಕೊಂಡ ಡಿಆರ್ ಸಿಬ್ಬಂದಿ. ಇವರು ಹೊನ್ನಾವರ ತಾಲೂಕಿನ ಹಳದಿಪುರ ನಿವಾಸಿ. ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಕಚೇರಿಗೆ ಗುರುಪ್ರಸಾದ್​ ಆಗಮಿಸಿದ್ದರು. ಅಲ್ಲೇ ಆತ್ಮಹತ್ಯೆ ಮಾಡಕೊಂಡಿದ್ದಾರೆ. ಸಾವಿಗೆ ಕಾರಣ ಏನೆಂದು ಗೊತ್ತಾಗಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net