ಎನ್​ಟಿಆರ್ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆ

NTR daughter Uma Maheswari
Published on

ಹೈದ್ರಾಬಾದ್​: ಆಂಧ್ರಪ್ರದೇಶದ ಮಾಜಿ ಸಿಎಂ, ಮೇರು ನಟ ದಿ. ಎನ್​.ಟಿ.ರಾಮರಾವ್​ ಅವರ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಉಮಾಮಹೇಶ್ವರಿ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜುಬಿಲಿ ಹಿಲ್ಸ್​ ನಿವಾಸದಲ್ಲೇ ಸೋಮವಾರ ನೇಣುಬಿಗಿದ ಸ್ಥಿತಿಯಲ್ಲಿ ಉಮಾಮಹೇಶ್ವರಿ ಅವರ ಮೃತದೇಹ ಪತ್ತೆಯಾಗಿದ್ದು, ಮರೋಣತ್ತರ ಪರೀಕ್ಷೆಗಾಗಿ ಉಸ್ಮನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸರ್ಕಲ್​ ಇನ್​ಸ್ಪೆಕ್ಟರ್​ ರಾಜಶೇಖರ್​ ರೆಡ್ಡಿ ತಿಳಿಸಿದ್ದಾರೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್​ಟಿಆರ್ ಅವರಿಗೆ 12 ಮಕ್ಕಳು. ಅದರಲ್ಲಿ ಐವರು ಹೆಣ್ಣುಮಕ್ಕಳು. ಉಮಾ ಕಿರಿಯ ಮಗಳು. ಇವರಿಗೆ 54 ವರ್ಷ ವಯಸ್ಸಾಗಿತ್ತು. ಇವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net